ಸಾರಾಂಶ
ಮಾಲ್ಡೀವ್ಸ್‌ನ 1000 ನಾಗರಿಕ ಸೇವಾ ಸಿಬ್ಬಂದಿಗೆ ತರಬೇತಿ ನೀಡುವಂತೆ ಮಾಲ್ಡೀವ್ಸ್ ಭಾರತ ಸರ್ಕಾರವನ್ನು ಕೋರಿದೆ.
ನವದೆಹಲಿ: ಭಾರತದೊಂದಿಗಿನ ಸಂಬಂಧ ಪೂರ್ಣ ಹಳಸಿದ್ದರೂ, ತನ್ನ ಅಧಿಕಾರಿಗಳಿಗೆ ತರಬೇತಿ ನೀಡಿ ಎಂದು ಭಾರತಕ್ಕೆ ಮಾಲ್ಡೀವ್ಸ್ ಮನವಿ ಮಾಡಿದೆ.
ಈ ಕುರಿತು 2019ರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಹಿಲ್ ಮಾಡಿಕೊಂಡಿದ್ದ ಒಪ್ಪಂದವನ್ನು ನವೀಕರಿಸುವಂತೆ ಭಾರತ ಸರ್ಕಾರಕ್ಕೆ ಕೋರಿದೆ.ಒಂದು ವೇಳೆ ಭಾರತ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಮಾಲ್ಡೀವ್ಸ್‌ನ 1000 ಸಾವಿರ ಅಧಿಕಾರಿಗಳು ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ತರಬೇತಿ ಪಡೆಯಲಿದ್ದಾರೆ.
2019ರಲ್ಲಿ ಮಾಲ್ಡೀವ್ಸ್ ನಾಗರಿಕ ಸೇವಾ ಆಯೋಗ ಹಾಗೂ ಕೇಂದ್ರ ಆಡಳಿತ ಸುಧಾರಣೆ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.