ಸಾರಾಂಶ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್ ಪುತ್ರಿ ಮರಿಯಂ ಆಯ್ಕೆಯಾಗಿದ್ದಾರೆ.
ಲಾಹೋರ್: ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಪಿಎಂಎಲ್-ಎನ್ ನಾಯಕ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಂ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು.
ಲಾಹೋರ್‌ನ ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿಯ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮರ್ಯಂ ಅವರು ಇಮ್ರಾನ್ ಖಾನ್ ಬೆಂಬಲಿತ ಸಿಐಸಿ ಅಭ್ಯರ್ಥಿ ರಾಣಾ ಅಫ್ತಾಬ್ ಅವರನ್ನು ಸೋಲಿಸಿ ಮುಖ್ಯಮಂತ್ರಿಯಾಗಿ ಚುನಾಯಿತರಾದರು.
ಫೆ.8ರಂದು ನಡೆದ ಚುನಾವಣೆಯಲ್ಲಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಪಿಪಿಪಿ ಪಕ್ಷದೊಂದಿಗೆ ಪಾಕಿಸ್ತಾನದಲ್ಲಿ ಕೇಂದ್ರ ಸರ್ಕಾರ ರಚಿಸಿದ್ದು, ಅವರ ಸೋದರ ಶೆಹಬಾಜ್ ಅವರನ್ನು ಪ್ರಧಾನಿಯಾಗಿ ಆರಿಸಲಾಗಿತ್ತು.