ಸಾರಾಂಶ
ಮಂಗಳವಾರ ರಾತ್ರಿ ಮೆಟಾ ಸಂಸ್ಥೆಗೆ ಸೇರಿದ ಸಾಮಾಜಿಕ ಜಾಲತಾಣಗಳಲ್ಲಿ ಸರ್ವರ್ ಡೌನ್ ಆದ ಪರಿಣಾಮ ಅದರ ಮಾಲೀಕರಾದ ಮಾರ್ಕ್ ಜುಕರ್‌ಬರ್ಗ್‌ಗೆ 25 ಸಾವಿರ ಕೋಟಿ ರು. ನಷ್ಟ ಉಂಟಾಗಿದೆ.
ನವದೆಹಲಿ: ಮಂಗಳವಾರ ತಡರಾತ್ರಿ ಮೆಟಾ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್‌ಟಾಗ್ರಾಂ ಮತ್ತು ಥ್ರೆಡ್‌ಗಳಲ್ಲಿ ಸರ್ವರ್ ಡೌನ್ ಆದ ಪರಿಣಾಮ ಸಂಸ್ಥೆಯ ಷೇರುಗಳು ಶೇ. 1.6ರಷ್ಟು ಕುಸಿತಗೊಂಡು ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 25000 ಕೋಟಿ ರು. (2.79 ಬಿಲಿಯನ್ ಡಾಲರ್) ನಷ್ಟ ಅನುಭವಿಸಿದ್ದಾರೆ.
ಕುಸಿತದ ಬಳಿಕ ಕಂಪನಿಯಲ್ಲಿ ಜುಕರ್‌ಬರ್ಗ್ ಹೊಂದಿದ್ದ ಷೇರುಗಳ ಮೌಲ್ಯ 14.96 ಲಕ್ಷ ಕೋಟಿ ರು.ಗೆ ಕುಸಿದಿದೆ.ಈ ಕುಸಿತದ ಹೊರತಾಗಿಯೂ ಅವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಮುಂದುವರೆದಿದ್ದಾರೆ.