ಸಾರಾಂಶ
ಮಾಲ್ಡೀವ್ಸ್ ಅಧ್ಯಕ್ಷರಿಗೆ ಚೀನಾದಿಂದ ಭರ್ಜರಿ ಸತ್ಕಾರ ದೊರಕಿದ್ದು, ಕೆಂಪು ಹಾಸಿನ ಸ್ವಾಗತ, ಕುಶಾಲುತೋಪು, ಔತಣಕೂಟ ಏರ್ಪಡಿಸಲಾಗಿತ್ತು.
ಬೀಜಿಂಗ್: ಭಾರತ ವಿರೋಧಿ ನಿಲುವು ಹೊಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜುಗೆ ಚೀನಾ ಕೆಂಪುಹಾಸಿನ ಸ್ವಾಗತ ನೀಡಿ ಗೌರವಿಸಿದೆ. 5 ದಿನಗಳ ಭೇಟಿಗಾಗಿ ಆಗಮಿಸಿರುವ ಮುಯಿಜುಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬುಧವಾರ ಕೆಂಪುಹಾಸಿನ ಸ್ವಾಗತ ನೀಡಿದರು.
ಜೊತೆಗೆ ಈ ವೇಳೆಗೆ ಅವರಿಗೆ 21 ಗನ್‌ಸಲ್ಯೂಟ್ ಕೂಡಾ ನೀಡಲಾಯಿತು. ನಗರದ ಸಾರ್ವಜನಿಕರ ಗ್ರೇಟ್ ಹಾಲ್‌ಗೆ ಬುಧವಾರ ದ್ವಿಪಕ್ಷೀಯ ಮಾತುಕತೆಗೆ ತೆರಳುವ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು಼ಗೆ ಈ ರೀತಿ ವಿಶೇಷ ಗೌರವ ನೀಡಲಾಗಿದೆ.
ಅಲ್ಲದೆ 20 ದ್ವಿಪಕ್ಷೀಯ ಒಪ್ಪಂದ ಫಲಪ್ರದವಾದ ಬಳಿಕೆ ಷಿ ಜಿನ್‌ಪಿಂಗ್ ದಂಪತಿ ಮೊಹಮ್ಮದ್ ಮುಯಿಜುಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ.