ಯುಎಇನಿಂದ ಭಾರತದ ಅಪರಾಧಿ ನರೇಂದ್ರ ಸಿಂಗ್‌ ಗಡೀಪಾರು

| Published : Feb 17 2024, 01:16 AM IST

ಸಾರಾಂಶ

ಯುಎಇಯಲ್ಲಿ ತಲೆಮರೆಸಿಕೊಂಡಿದ್ದ ಭಾರತದ ಕೊಲೆ ಅಪರಾಧಿ ನರೇಂದ್ರ ಸಿಂಗ್‌ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.

ನವದೆಹಲಿ: ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿದ್ದ ನಾಲ್ಕು ತಿಂಗಳಲ್ಲೇ ಭಾರತದ ಹರ್‍ಯಾಣ ಮೂಲದ ಕೊಲೆ ಮತ್ತು ಗಲಭೆಕೋರ ನರೇಂದ್ರ ಸಿಂಗ್‌ನನ್ನು ಯುಎಇನಲ್ಲಿ ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ.ಜಿಯೋ ಲೊಕೇಷನ್‌ ತಂತ್ರಜ್ಞಾನದ ಮೂಲಕ ಅಪರಾಧಿಯು ಯುಎಇಯಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ ನರೇಂದ್ರ ಸಿಂಗ್‌ನನ್ನು ಬಂಧಿ ಸಲಾಗಿದೆ. ನರೇಂದ್ರ ಸಿಂಗ್‌ಗೆ ಹರ್‍ಯಾಣ ಕೋರ್ಟ್‌ 2009ರಲ್ಲಿ ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡಿದ್ದರೂ ಆತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕಳೆದ ನ.7ರಂದು ನರೇಂದ್ರ ತೋಮರ್‌ ಪತ್ತೆಗೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿತ್ತು.