ಅಪರೂಪದ ಲೋಹ ಕ್ಷುದ್ರಗ್ರಹ ಅರಸಿ ಹೊರಟ ನಾಸಾ ವ್ಯೋಮನೌಕೆ

| Published : Oct 14 2023, 01:00 AM IST / Updated: Oct 14 2023, 01:01 AM IST

ಅಪರೂಪದ ಲೋಹ ಕ್ಷುದ್ರಗ್ರಹ ಅರಸಿ ಹೊರಟ ನಾಸಾ ವ್ಯೋಮನೌಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರು ಮತ್ತು ಶುಕ್ರಗ್ರಹಗಳ ನಡುವೆ ಇರುವ ಕ್ಷುದ್ರಗ್ರಹವೊಂದರಲ್ಲಿ ಲೋಹ ಇರುವುದನ್ನು ಪತ್ತೆಹಚ್ಚಿರುವ ನಾಸಾ ವಿಜ್ಞಾನಿಗಳು, ಈ ಅಪರೂಪದ ಲೋಹ ಕ್ಷುದ್ರಗ್ರಹ ಅಧ್ಯಯನಕ್ಕೆ ವ್ಯೋಮನೌಕೆಯೊಂದನ್ನು ಕೇಪ್‌ ಕನವೆರಲ್‌ ಉಡಾವಣಾ ಕೇಂದ್ರದಿಂದ ಕಳುಹಿಸಿಕೊಟ್ಟಿದ್ದಾರೆ.
ಫ್ಲೋರಿಡಾ: ಗುರು ಮತ್ತು ಶುಕ್ರಗ್ರಹಗಳ ನಡುವೆ ಇರುವ ಕ್ಷುದ್ರಗ್ರಹವೊಂದರಲ್ಲಿ ಲೋಹ ಇರುವುದನ್ನು ಪತ್ತೆಹಚ್ಚಿರುವ ನಾಸಾ ವಿಜ್ಞಾನಿಗಳು, ಈ ಅಪರೂಪದ ಲೋಹ ಕ್ಷುದ್ರಗ್ರಹ ಅಧ್ಯಯನಕ್ಕೆ ವ್ಯೋಮನೌಕೆಯೊಂದನ್ನು ಕೇಪ್‌ ಕನವೆರಲ್‌ ಉಡಾವಣಾ ಕೇಂದ್ರದಿಂದ ಕಳುಹಿಸಿಕೊಟ್ಟಿದ್ದಾರೆ. ಈವರೆಗೆ ಕೇವಲ ಮಂಜುಗಡ್ಡೆ ಹಾಗೂ ಕಲ್ಲಿನ ಕ್ಷುದ್ರಗ್ರಹಗಳ ಅಧ್ಯಯನ ನಡೆದಿತ್ತು. ಆದರೆ ಈಗ ಉಕ್ಕು ಮತ್ತು ನಿಕ್ಕೆಲ್‌ ಲೋಹಗಳಿದೆ ಎನ್ನಲಾಗಿರುವ ಅತಿದೊಡ್ಡ ಲೋಹ ಹೊಂದಿರುವ ಕ್ಷುದ್ರಗ್ರಹಕ್ಕೆ ಸೈಕ್‌ ಎಂದು ಹೆಸರಿಟ್ಟಿದ್ದು, ಈ ಕ್ಷುದ್ರಗ್ರಹವನ್ನು ನೌಕೆ 2029ರಲ್ಲಿ ತಲುಪಲಿದೆ. 2031ರವರೆಗೆ ಇದು ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಇಲ್ಲಿರುವ ಉಕ್ಕು ಲೋಹದಲ್ಲಿ ಚಿನ್ನ-ಬೆಳ್ಳಿ ಮುಂತಾದ ದುಬಾರಿ ಲೋಹಗಳು ಮಿಶ್ರಣವಾಗಿರಬಹುದು ಎಂದೂ ಅಂದಾಜಿಸಲಾಗಿದೆ. ಇದರಿಂದ ಭೂಮಿಯ ಗುರುತ್ವಾಕರ್ಷಣಾ ಶಕ್ತಿಯ ಉಗಮಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಸುಳಿವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.