ಸಾರಾಂಶ
ಭಾರತೀಯರಲ್ಲಿ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ನಶೀದ್ ಕ್ಷಮೆ ಕೋರಿದ್ದು, ಮಾಲ್ಡೀವ್ಸ್‌ಗೆ ಬನ್ನಿ ಎಂದು ಭಾರತೀಯರಿಗೆ ಮನವಿ ಮಾಡಿದ್ದಾರೆ.
ನವದೆಹಲಿ: ಭಾರತದ ಜತೆಗೆ ಹಾಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಸಂಘರ್ಷಕ್ಕೆ ಇಳಿದಿರುವ ಕಾರಣ ಭಾರತೀಯರನ್ನೇ ನಚ್ಚಿದ್ದ ಮಾಲ್ಡೀವ್ಸ್ ಪ್ರವಾಸೋದ್ಯಮ ತತ್ತರಿಸಿದೆ. ಹೀಗಾಗಿ ಮಾಲ್ಡೀವ್ಸ್ ಜನರ ಪರವಾಗಿ ಆ ದೇಶದ ಮಾಜಿ ಅಧ್ಯಕ್ಷ ನಶೀದ್ ಭಾರತೀಯರಲ್ಲಿ ಕ್ಷಮೆಯಾಚಿಸಿದ್ದಾರೆ.
ಶನಿವಾರ ಹೇಳಿಕೆ ನೀಡಿರುವ ನಶೀದ್, ‘ಭಾರತೀಯರ ಬಹಿಷ್ಕಾರದಿಂದ ಮಾಲ್ಡೀವ್ಸ್‌ನ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಪ್ರಮುಖವಾಗಿ ಪ್ರವಾಸೋದ್ಯಮ ಕ್ಷೇತ್ರದ ಆರ್ಥಿಕತೆ ಅತಂತ್ರ ಸ್ಥಿತಿಗೆ ತಲುಪಿದೆ.
ಹೀಗಾಗಿ ನಾನು ಭಾರತೀಯರಲ್ಲಿ ಕ್ಷಮೆ ಯಾಚಿಸುತ್ತೇನೆ. ಹೀಗಾಗಿ ಭಾರತೀಯರು ಮತ್ತೆ ಮಾಲ್ಡೀವ್ಸ್‌ಗೆ ಬರಬೇಕು. ಈ ಹಿಂದಿನಂತೆಯೇ ಅವರಿಗೆ ಆದರಾತಿಥ್ಯ ನೀಡುತ್ತೇವೆ ಎಂದಿದದ್ದಾರೆ.