ಗೋಮಾಂಸ ತಿನ್ನುವಂತೆ ಬಲವಂತ ಮಾಡಿದರು: ನಿಖಿಲ್ ಗುಪ್ತಾ ಅಳಲು

| Published : Dec 16 2023, 02:01 AM IST / Updated: Dec 20 2023, 11:03 AM IST

Khalistani terrorist Pannun
ಗೋಮಾಂಸ ತಿನ್ನುವಂತೆ ಬಲವಂತ ಮಾಡಿದರು: ನಿಖಿಲ್ ಗುಪ್ತಾ ಅಳಲು
Share this Article
  • FB
  • TW
  • Linkdin
  • Email

ಸಾರಾಂಶ

ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಸಂಚು ಪ್ರಕರಣದಲ್ಲಿ ಬಂಧಿತನಾಗಿರುವ ಭಾರತೀಯ ನಿಖಿಲ್‌ ಗುಪ್ತಾನನ್ನು, ಚೆಕ್‌ ಗಣರಾಜ್ಯದ ಜೈಲಲ್ಲಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ. 

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಸಂಚು ಪ್ರಕರಣದಲ್ಲಿ ಚೆಕ್‌ ಗಣರಾಜ್ಯದಲ್ಲಿ ಬಂಧಿತನಾಗಿರುವ ಭಾರತೀಯ ನಿಖಿಲ್‌ ಗುಪ್ತಾನನ್ನು, ಚೆಕ್‌ ಜೈಲಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಗೋಮಾಂಸ ತಿನ್ನುವಂತೆ ಬಲವಂತ ಮಾಡಿ ಆತನ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಆತನ ಕುಟುಂಬ ಭಾರತದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿವರ ಬಹಿರಂಗಗೊಂಡಿದೆ.

ಅದರಂತೆ ನಿಖಿಲ್‌ ಗುಪ್ತಾನನ್ನು ಜೂ.30ರಂದು ಪರಾಗ್ವೆ ವಿಮಾನ ನಿಲ್ದಾಣಕ್ಕೆ ಕರೆದೊಯ್ದ ನಂತರ ಆತನನ್ನು ಕಪ್ಪು ಬಣ್ಣದ ಎಸ್‌ಯುವಿ ಕಾರಿನಲ್ಲಿ ಹತ್ತಿಸಿ ಅಲ್ಲಿಯೇ 3 ಗಂಟೆಗಳ ಕಾಲ ತಿರುಗಾಡುತ್ತಲೇ ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆತನ ಮೊಬೈಲನ್ನು ವಶಪಡಿಸಿಕೊಂಡು ಅದರಲ್ಲಿನ ಮಾಹಿತಿಯನ್ನು ಕದ್ದಾಲಿಕೆ ಮಾಡಲಾಗಿದೆ. ಇದರ ಜೊತೆಗೆ ಆತನಿಗೆ ದನದ ಮಾಂಸವುಳ್ಳ ಆಹಾರವನ್ನು ತಿನ್ನುವಂತೆ ಒತ್ತಾಯಪಡಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆತನ ಪೋಷಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.