ಅಮೆರಿಕದಲ್ಲಿ ಹಿಂಸೆಗೆ ಜಾಗವಿಲ್ಲ: ಬೈಡೆನ್‌

| Published : Jul 15 2024, 01:50 AM IST / Updated: Jul 15 2024, 04:16 AM IST

Donald trump and Joe Biden

ಸಾರಾಂಶ

ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ತಮ್ಮ ಎದುರಾಳಿ ಡೊನಾಲ್ಡ್‌ ಟ್ರಂಪ್‌ ಮೇಲಿನ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಅಮೆರಿಕದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕಾಗೋ: ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ತಮ್ಮ ಎದುರಾಳಿ ಡೊನಾಲ್ಡ್‌ ಟ್ರಂಪ್‌ ಮೇಲಿನ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಅಮೆರಿಕದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ಅಲ್ಲದೆ ಟ್ರಂಪ್‌ ಜತೆ ಖುದ್ದು ಫೋನ್‌ನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.ಟ್ರಂಪ್‌ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬೈಡೆನ್‌, ‘ಇಂಥ ಹಿಂಸೆಗೆ ಅಮೆರಿಕದಲ್ಲಿ ಆಸ್ಪದವಿಲ್ಲ. ಇದೊಂದು ರೋಗಪೀಡಿತ ಮನಸ್ಥಿತಿ ಮತ್ತು ಈ ಕಾರಣಕ್ಕಾಗಿಯೇ ನಾವು ಈ ದೇಶವನ್ನು ಒಗ್ಗೂಡಿಸಬೇಕಿದೆ. ಇಂಥದ್ದಕ್ಕೆ ದೇಶದಲ್ಲಿ ನಾವು ಅವಕಾಶ ನೀಡಲಾಗದು. ನಾವು ಈ ರೀತಿ ಇರಲು ಸಾಧ್ಯವಿಲ್ಲ, ಇಂಥದ್ದನ್ನೆಲ್ಲಾ ನಾವು ಅನುಮೋದಿಸುವುದಿಲ್ಲ’ ಎಂದು ಹೇಳಿದ್ದಾರೆ.

ಜೊತೆಗೆ, ‘ಟ್ರಂಪ್‌ ಸುರಕ್ಷಿತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಸಮಾಧಾನ ತಂದಿದೆ. ಟ್ರಂಪ್‌, ಅವರ ಕುಟುಂಬ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರ ಸುರಕ್ಷತೆಗೆ ನಾನು ಪ್ರಾರ್ಥಿಸುತ್ತೇನೆ. ಟ್ರಂಪ್‌ರನ್ನು ರಕ್ಷಿಸಿದ್ದಕ್ಕಾಗಿ ಸೀಕ್ರೆಟ್‌ ಸರ್ವೀಸ್‌ಗೆ ನಾನು ಮತ್ತು ಜಿಲ್‌ ಕೃತಜ್ಞರಾಗಿದ್ದೇವೆ’ ಎಂದು ಬೈಡೆನ್‌ ಪ್ರತಿಕ್ರಿಯಿಸಿದ್ದಾರೆ.ಇದಾದ ಬಳಿಕ ಬೈಡೆನ್‌, ಟ್ರಂಪ್‌ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ ಕ್ಷೇಮ ವಿಚಾರಿಸಿದರು.