ಸಾರಾಂಶ
ಟು ಕಿಲ್ ಎ ಟೈಗರ್ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯ ಚಿತ್ರವಾಗಿದ್ದು, ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶಿತವಾಗಿದೆ.
ಲಾಸ್ ಎಂಜಲೀಸ್: ಪ್ರಪಂಚದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾಗಿರುವ ಆಸ್ಕರ್ ಸೋಮವಾರ ಮುಂಜಾನೆ ಪ್ರಕಟವಾಗಲಿದ್ದು, ಇದಕ್ಕಾಗಿ ಅಮೆರಿಕದ ಹಾಲಿವುಡ್‌ನಲ್ಲಿರುವ ಡಾಲ್ಬಿ ಸ್ಟುಡಿಯೋಸ್ ಸಭಾಂಗಣ ಸಜ್ಜುಗೊಂಡಿದೆ.
ಅಕಾಡೆಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಾಮನಿರ್ದೇಶಿತರ ಪಟ್ಟಿಯನ್ನು ಜ.23ರಂದು ಪ್ರಕಟಿಸಿದ್ದು, ಭಾರತೀಯ ಚಲನಚಿತ್ರಗಳ ಪೈಕಿ ಕೆನಡಾ ಪ್ರಜೆಯೊಬ್ಬರು ಭಾರತದ ಜಾರ್ಖಂಡ್‌ನಲ್ಲಿ ನಡೆದಿರುವ ಸತ್ಯಘಟನೆಯನ್ನು ಆಧರಿಸಿ ನಿರ್ಮಿಸಿರುವ ‘ಟಿ ಕಿಲ್ ಎ ಟೈಗರ್’ ಸಾಕ್ಷ್ಯಚಿತ್ರ ಮಾತ್ರ ಅಂತಿಮ ಸುತ್ತು ಪ್ರವೇಶಿಸಿದೆ.
ಉಳಿದಂತೆ ಭಾರತದಲ್ಲಿ ವಿವಾದ ಸೃಷ್ಟಿಸಿದ್ದ ಓಪನ್‌ಹೈಮರ್ ಚಿತ್ರ 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಪ್ರಶಸ್ತಿ ಗೆಲ್ಲುವ ನೆಚ್ಚಿನ ಚಿತ್ರ ಎನಿಸಿದೆ.
)
;Resize=(128,128))
;Resize=(128,128))