ಸಾರಾಂಶ
ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ನೀಡುವ ಆಸ್ಕರ್ ಪ್ರಶಸ್ತಿ ನೀಡಲು ನಟ ಜೋನ್ ಸೆನಾ ‘ನಗ್ನರಾಗಿ’ ವೇದಿಕೆ ಮೇಲೆ ಬಂದ ಘಟನೆ ಸೋಮವಾರ ನಡೆಯಿತು.
ಲಾಸ್ ಏಂಜಲೀಸ್: ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ನೀಡುವ ಆಸ್ಕರ್ ಪ್ರಶಸ್ತಿ ನೀಡಲು ನಟ ಜೋನ್ ಸೆನಾ ‘ನಗ್ನರಾಗಿ’ ವೇದಿಕೆ ಮೇಲೆ ಬಂದ ಘಟನೆ ಸೋಮವಾರ ನಡೆಯಿತು. ಅಂದರೆ ಅವರು ಚರ್ಮದ ಬಣ್ಣದ ಉಡುಗೆ ತೊಟ್ಟಿದ್ದರಿಂದ ಬೆತ್ತಲಾಗಿ ಬಂದಂತೆ ಕಂಡರು. ಆಯೋಜಕರು ಪ್ರಶಸ್ತಿ ವಿತರಣೆಗಾಗಿ ಜೋನ್ ಸೆನಾ ಅವರನ್ನು ಕರೆಯುತ್ತಲೇ ಅವರು ಪ್ರಶಸ್ತಿ ವಿಜೇತರ ಹೆಸರನ್ನು ಒಳಗೊಂಡ ಕವರ್ ಮೂಲಕ ತಮ್ಮ ಗುಪ್ತಾಂಗಗಳನ್ನು ಮುಚ್ಚಿಕೊಂಡು ವೇದಿಕೆ ಮೇಲೆ ಆಗಮಿಸಿದರು. ಬಳಿಕ ಹಿಂಬದಿಯಿಂದ ಸ್ಪರ್ಧೆಯಲ್ಲಿ ಇದ್ದವರ ಹೆಸರು ಘೋಷಣೆಯಾಗುವ ವೇಳೆ ದೊಡ್ಡ ಪರದೆಯೊಂದು ವೇದಿಕೆಯನ್ನು ಮುಚ್ಚಿತು. ಎಲ್ಲಾ ಸ್ಪರ್ಧಾಳುಗಳು ಹೆಸರು ಮುಗಿದು ವೇದಿಕೆಯಲ್ಲಿ ಬೆಳಕು ಮೂಡುತ್ತಲೇ ಜೋನ್ ಅವರಿಗೆ ಬಟ್ಟೆಯೊಂದನ್ನು ಹೊದಿಸಿ ಬಳಿಕ ಅವರಿಂದ ಪ್ರಶಸ್ತಿ ವಿತರಿಸಲಾಯಿತು.