ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 8 ಜನರ ಸಾವು

| Published : Mar 19 2024, 12:48 AM IST

ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 8 ಜನರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, 8 ಜನ ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್‌/ಕಾಬೂಲ್‌: ಅಫ್ಘಾನಿಸ್ತಾನದ ಎರಡು ನಗರಗಳ ಮೇಲೆ ಪಾಕಿಸ್ತಾನ ಸೋಮವಾರ ವೈಮಾನಿಕ ದಾಳಿ ನಡೆಸಿದೆ.

ಇದರಲ್ಲಿ ಮೂರು ಮಕ್ಕಳು ಮತ್ತು ಮಹಿಳೆಯರು ಸೇರಿ ಎಂಟು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್‌ ಸರ್ಕಾರ ಹೇಳಿದೆ.

ಇತ್ತೀಚಿಗೆ ಪಾಕಿಸ್ತಾನದ ಕೆಲ ನಗರಗಳಲ್ಲಿ ನಡೆದ ಉಗ್ರ ದಾಳಿಯ ಹಿಂದೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ಉಗ್ರರ ಕೈವಾಡ ಇದೆ ಎಂಬ ಆರೋಪದ ಮೇಲೆ ಪಾಕ್‌ ಈ ದಾಳಿ ನಡೆಸಿದೆ.

‘ಪಾಕಿಸ್ತಾನ ಗಡಿಯಲ್ಲಿರುವ ಅಫ್ಘಾನಿಸ್ತಾನ ಪ್ರಾಂತ್ಯದ ಪಾಕ್ತಿಕಾ ಮತ್ತು ಖೋಸ್ಟ್‌ನ ನಾಗರಿಕ ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೈಮಾನಿಕ ದಾಳಿ ನಡೆದಿದೆ.