ಶೆಹಬಾಜ್‌ ಪಾಕ್‌ ನೂತನ ಪ್ರಧಾನಿ, ಜರ್ದಾರಿ ಅಧ್ಯಕ್ಷ

| Published : Feb 22 2024, 01:48 AM IST

ಶೆಹಬಾಜ್‌ ಪಾಕ್‌ ನೂತನ ಪ್ರಧಾನಿ, ಜರ್ದಾರಿ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದಲ್ಲಿ ಕೊನೆಗೂ ಪಿಪಿಪಿ, ಪಿಎಂಎಲ್‌ಎನ್‌ ಸಮ್ಮಿಶ್ರ ಸರ್ಕಾರ ರಚನೆಗೆ ಅಂತಿಮ ಒಪ್ಪಿಗೆ ನೀಡಿದ್ದು, ಶಹಬಾಜ್‌ ಷರೀಫ್‌ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲಿದ್ದಾರೆ ಮತ್ತು ಆಸಿಫ್‌ ಅಲಿ ಜರ್ದಾರಿ ಪಾಕಿಸ್ತಾನದ ನೂತುನ ಆಧ್ಯಕ್ಷರಾಗಲಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಕೊನೆಗೂ ಸರ್ಕಾರ ರಚನೆಯಾಗಿದ್ದು, ಪಿಎಂಎಲ್‌ಎನ್‌ ಪಕ್ಷದ ಶೆಹಬಾಜ್‌ ಷರೀಫ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಪಿಪಿಪಿ ಪಕ್ಷದ ಸಹ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆ ನಡೆದು 12 ದಿನಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿಗೆ ದೊರೆತಿದ್ದು, ನವಾಜ್‌ ಷರೀಫ್ ನೇತೃತ್ವದ ಪಿಎಂಎನ್‌ಎಲ್‌ ಹಾಗು ಬಿಲಾವಲ್‌ ಭುಟ್ಟೋ ನೇತೃತ್ವದ ಪಿಪಿಪಿ ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಭುಟ್ಟೋ, ಶೆಹಬಾಜ್‌ ಷರೀಫ್‌(72) ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ. ಸರ್ಕಾರ ರಚನೆ ಮಾಡಲು ಬೇಕಾದಷ್ಟು ಶಾಸಕರು ನಮ್ಮ ಬಳಿ ಇದ್ದು, ನಾವು ಹಕ್ಕು ಮಂಡಿಸಿದ್ದೇವೆ ಎಂದು ಹೇಳಿದ್ದಾರೆ. ಚುನಾವಣೆಯ ಬಳಿಕ ಯಾವುದೇ ಪಕ್ಷ ಬಹುಮತ ಪಡೆದುಕೊಂಡಿರಲಿಲ್ಲ. ಇಮ್ರಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದ್ದರೂ ಮೈತ್ರಿ ನಿರಾಕರಿಸಿದ್ದರು. ಹೀಗಾಗಿ ಸರ್ಕಾರ ರಚನೆ ವಿಳಂಬವಾಗಿತ್ತು. ಮತ್ತೊಂದಡೆ ಪಿಪಿಪಿ ಮತ್ತು ಪಿಎಂಎನ್‌ಎಲ್‌ ಮೈತ್ರಿಗೆ ಒಪ್ಪಿಕೊಂಡಿದ್ದರೂ ಸಹ ಅಧಿಕಾರ ಹಂಚಿಕೆಯ ಬಗ್ಗೆ ಇದ್ದ ಗೊಂದಲದಿಂದಾಗಿ ಸರ್ಕಾರ ರಚನೆಯಾಗಿರಲಿಲ್ಲ.