ಪಾಕಿಸ್ತಾನದ ಗಾಯಕಿಯೊಬ್ಬರು ಟೀವೀ ಶೋ ನಿರೂಪಕನಿಗೆ ಲೈವ್‌ ಶೋನಲ್ಲೇ ಥಳಿಸಿದ್ದಾರೆ.

ಲೈವ್‌ ಶೋನಲ್ಲಿ ಹನಿಮೂನ್‌ ಬಗ್ಗೆ ಕೇಳಿದ್ದಕ್ಕೆ ಬಿತ್ತು ಗೂಸಾ!
ಟೀವಿ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಹಾಸ್ಯ ಕಾರ್ಯಕ್ರಮಗಳಲ್ಲಿ ಮನರಂಜನೆ ಜೊತೆಗೆ ಯಾವುದಾದರು ಸೆಲೆಬ್ರಿಟಿಗಳನ್ನು ಕರೆದು ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳುವುದನ್ನು ನಾವು ನೋಡಿರುತ್ತೇವೆ. 

ಅದೇ ರೀತಿ ಪಾಕಿಸ್ತಾನದ ಟೀವಿ ಕಾರ್ಯಕ್ರಮದಲ್ಲಿ ಫೇಮಸ್ ಗಾಯಕಿಯನ್ನು ಕರೆದು ನಿರೂಪಕನೊಬ್ಬ ಅವರ ಹನಿಮೂನ್‌ ಬಗ್ಗೆ ಪ್ರಶ್ನೆ ಕೇಳಿದ್ದಾನೆ. 

ಈ ಪ್ರಶ್ನೆಗೆ ಕ್ರೋಧಗೊಂಡ ಗಾಯಕಿ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. ಬಳಿಕ ಟೀವಿ ಶೋಗೆ ಕ್ಯಾಕರಿಸಿ ಉಗಿದು ಹೊರ ನಡೆದಿದ್ದಾರೆ.