3-5 ತಾಸು ನಿದ್ರಿಸುತ್ತೀರಾ ಹಾಗಿದ್ದರೆ ನಿಮಗೆ ಶುಗರ್‌ ಕಾಯಿಲೆ ಬರುವ ಚಾನ್ಸ್‌ ಹೆಚ್ಚು!

| Published : Mar 07 2024, 01:50 AM IST

3-5 ತಾಸು ನಿದ್ರಿಸುತ್ತೀರಾ ಹಾಗಿದ್ದರೆ ನಿಮಗೆ ಶುಗರ್‌ ಕಾಯಿಲೆ ಬರುವ ಚಾನ್ಸ್‌ ಹೆಚ್ಚು!
Share this Article
  • FB
  • TW
  • Linkdin
  • Email

ಸಾರಾಂಶ

ದಿನದಲ್ಲಿ ಆರು ತಾಸಿಗಿಂತ ಕಡಿಮೆ ನಿದ್ರಿಸುವವರಲ್ಲಿ ಎರಡನೇ ಹಂತದ ಡಯಾಬಿಟೀಸ್‌ ಖಾಯಿಲೆ ಬರುವ ಸಂಭವನೀಯತೆ ಹೆಚ್ಚಿರಲಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.

ನವದೆಹಲಿ: ದಿನಕ್ಕೆ ಕೇವಲ 3-5 ತಾಸು ನಿದ್ರೆ ಮಾಡುವ ಜನರು ಎರಡನೇ ಹಂತದ ಡಯಾಬಿಟಿಸ್‌ ಕಾಯಿಲೆ ಹೆಚ್ಚು ತುತ್ತಾಗಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಜೆಎಎಂಎ ನೆಟ್ವರ್ಕ್‌ ಓಪೆನ್‌ ಎಂಬ ವೃತ್ತಪತ್ರಿಕೆಯಲ್ಲಿ ಬಿಡುಗಡೆಯಾದ ವರದಿ ಈ ಕಳವಳಕಾರಿ ಮಾಹಿತಿ ಹೊರಹಾಕಿದೆ.

ದಿನಕ್ಕೆ 6 ಗಂಟೆಗಿಂತ ಕಡಿಮೆ ಅವಧಿ ನಿದ್ರಿಸುವವರ ದೇಹ ಬ್ಲಡ್‌ ಶುಗರ್‌ ಉತ್ಪಾದನೆಗೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ.

ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಪೂರೈಕೆಯನ್ನು ತಡೆಗಟ್ಟಲಿದೆ. ಇದರ ಪರಿಣಾಮ ದೇಹದಲ್ಲಿ ಹೈ ಬ್ಲಡ್‌ ಶುಗರ್‌ ಆಗಲಿದೆ.

ಇದು ಪೌಷ್ಟಿಕ ಆಹಾರ ಸೇವನೆಯಿಂದ ಸರಿದೂಗಿಸಲು ಆಗದು ಎಂದು ಸ್ವೀಡನ್‌ ದೇಶದ ಉಪ್ಸಾಲಾ ವಿಶ್ವ ವಿದ್ಯಾಲಯ ಹೊರತಂದ ವರದಿ ಹೇಳಿದೆ.