ರಷ್ಯಾ ಸರ್ವಕಾಲದ ಸ್ನೇಹಿತ: ಪುಟಿನ್‌ ಬಗ್ಗೆ ಮೋದಿ ಪ್ರಶಂಸೆ

| Published : Jul 10 2024, 12:31 AM IST / Updated: Jul 10 2024, 07:15 AM IST

ಸಾರಾಂಶ

ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಷ್ಯಾವನ್ನು ಸರ್ವಕಾಲದ ಸ್ನೇಹಿತ ಎಂದು ಕರೆದಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಎರಡು ದಶಕಗಳ ಕಾಲ ಶ್ರಮಿಸಿದ ಅಧ್ಯಕ್ಷ ಪುಟಿನ್ ಅವರನ್ನು ಶ್ಲಾಘಿಸಿದ್ದಾರೆ.

ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಷ್ಯಾವನ್ನು ಸರ್ವಕಾಲದ ಸ್ನೇಹಿತ ಎಂದು ಕರೆದಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಎರಡು ದಶಕಗಳ ಕಾಲ ಶ್ರಮಿಸಿದ ಅಧ್ಯಕ್ಷ ಪುಟಿನ್ ಅವರನ್ನು ಶ್ಲಾಘಿಸಿದ್ದಾರೆ.

ರಷ್ಯಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಾರತ-ರಷ್ಯಾದ ಸಂಬಂಧ ಪರಸ್ಪರ ನಂಬಿಕೆ ಹಾಗೂ ಗೌರವದ ಮೇಲೆ ನಿಂತಿದ್ದು, ವಿಪರೀತ ಪರಿಸ್ಥಿತಿಗಳಲ್ಲೂ ಇದು ಗಟ್ಟಿಗೊಂಡಿದೆ. ರಷ್ಯಾ ಎಂಬ ಪದ ಕೇಳುತ್ತಿದ್ದಂತೆ ನೆನಪಾಗುವ ಮೊದಲ ಪದ ‘ಸುಖ-ದುಃಖದ ಸಂಗಾತಿ.’ ಎಂದರು. ಇದೇ ವೇಳೆ ಪ್ರಭಾವ-ಆಧಾರಿತ ಜಾಗತಿಕ ವ್ಯವಸ್ಥೆಯನ್ನು ಖಂಡಿಸಿದ ಅವರು ಜಗತ್ತಿಗೆ ಬೇಕಾಗಿರುವುದು ಪ್ರಭಾವವಲ್ಲ, ಸಹಬಾಳ್ವೆ ಎನ್ನುತ್ತಾ ಭಾರತವನ್ನು ಉದಯೋನ್ಮುಖ ಬಹುಧ್ರುವೀಯ ವಿಶ್ವದ ಆಧಾರ ಸ್ತಂಭ ಎಂದು ಬಣ್ಣಿಸಿದ್ದಾರೆ.

ಯುದ್ಧ ಆರಂಭವಾದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ನೆರವಾದ ಪುಟಿನ್‌ಗೆ ಧನ್ಯವಾದ ತಿಳಿಸಿದರು. ಮೋದಿ ಪ್ರಧಾನಿಯಾದ ಬಳಿಕ ಆರು ಬಾರಿ ರಷ್ಯಾಗೆ ಭೇಟಿಕೊಟ್ಟಿದ್ದು, ಈ ಅವಧಿಯಲ್ಲಿ ಉಭಯ ನಾಯಕರು 17 ಬಾರಿ ಭೇಟಿಯಾಗಿದ್ದಾರೆ.