ಸಾರಾಂಶ
ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ, 2022ರ ಅಕ್ಟೋಬರ್‌ನಲ್ಲಿ ಅಣ್ವಸ್ತ್ರ ದಾಳಿ ನಡೆಸಲು ಸಜ್ಜಾಗಿತ್ತು. ಆಗ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾದಿಂದ ನಡೆಯಬಹುದಾಗಿದ್ದ ಈ ಸಂಭಾವ್ಯ ದಾಳಿ ತಪ್ಪಿಸಿದರು ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾಗಿ ಸಿಎನ್‌ಎನ್ ನ್ಯೂಸ್ ಭಾನುವಾರ ವರದಿ ಮಾಡಿದೆ.
ರಷ್ಯಾ ದೇಶವು ಡರ್ಟಿ ಬಾಂಬ್ ಹೆಸರಿನಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಸಜ್ಜಾಗುತ್ತಿದ್ದಾಗ ಅಮೆರಿಕ ಸರ್ಕಾರವು ಭಾರತವನ್ನೂ ಒಳಗೊಂಡಂತೆ ಹಲವು ರಷ್ಯಾದ ಮಿತ್ರದೇಶಗಳಿಗೆ ಕರೆ ಮಾಡಿತು.
ಅಣ್ವಸ್ತ್ರ ದಾಳಿ ಮಾಡದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಮನವೊಲಿಕೆ ಮಾಡಲು ಮೋದಿ ಅವರನ್ನು ಕೋರಲಾಯಿತು. ಆಗ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೇರಿದಂತೆ ಹಲವು ಜಾಗತಿಕ ನಾಯಕರು ಮಧ್ಯಪ್ರವೇಶಿಸಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಅಣ್ವಸ್ತ್ರ ದಾಳಿಯಿಂದ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳನ್ನು ಮನವರಿಕೆಕೊಟ್ಟರು.
ಈ ಮೂಲಕ ದಾಳಿಯನ್ನು ತಪ್ಪಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಉಜ್ಬೇಕಿಸ್ತಾನದಲ್ಲಿ ರಷ್ಯಾ ಅಧ್ಯಕ್ಷರಿಗೆ ಬಹಿರಂಗ ವೇದಿಕೆಯಲ್ಲೇ ಇದು ಯುದ್ಧದ ಯುಗವಲ್ಲ ಎಂದು ತಿಳುವಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಷ್ಯಾ ಅಣ್ವಸ್ತ್ರ ನಡೆಸುವ ದಾಳಿಯನ್ನು ಕೈಬಿಟ್ಟಿತು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಏನಿದು ಅಣ್ವಸ್ತ್ರ?
ಅಣ್ವಸ್ತ್ರ ಎನ್ನುವುದು ಅತ್ಯಮತ ಮಾರಣಾಂತಿಕ ಬಾಂಬ್ ದಾಳಿಯಾಗಿದ್ದು, ಅದರಿಂದ ಹಲವು ತಲೆಮಾರುಗಳವರೆಗೆ ಸ್ಫೋಟಿಸಲಾದ ಪ್ರದೇಶದಲ್ಲಿ ಸೋಂಕು ತಗುಲುವಷ್ಟು ಶಕ್ತಿಯುತವಾಗಿವೆ.
ಅಣುಬಾಂಬ್ ಬಿದ್ದ ಕಡೆ ಹಲವು ದಶಕ ಹುಲ್ಲು ಕಡ್ಡಿಯೂ ಬೆಳೆಯಲ್ಲ. ಕೊನೆಯದಾಗಿ 1945ರಲ್ಲಿ ಅಮೆರಿಕ ಎರಡನೇ ಮಹಾಯುದ್ಧದಲ್ಲಿ ಜಪಾನ್ ಮೇಲೆ ಎರಡು ಅಣ್ವಸ್ತ್ರಗಳನ್ನು ಹಾಕಿತ್ತು. ಪ್ರಸ್ತುತ ಅಣ್ವಸ್ತ್ರ ಸಂಗ್ರಹಣೆ, ತಯಾರಿಕೆ ಮತ್ತು ಬಳಕೆಯನ್ನು ಜಾಗತಿಕವಾಗಿ ನಿಷೇಧಿಸಲಾಗಿದೆ.
ಮೋದಿ ಅಣ್ವಸ್ತ್ರ ದಾಳಿ ತಡೆದಿದ್ದು ಹೇಗೆ?
ಡರ್ಟಿ ಬಾಂಬ್ ಹೆಸರಿನಲ್ಲಿ ಅಣ್ವಸ್ತ್ರ ದಾಳಿ ನಡೆಸಲು ಸಜ್ಜಾಗಿದ್ದ ರಷ್ಯಾಆಗ ಅಣ್ವಸ್ತ್ರ ದಾಳಿ ಮಾಡದಂತೆ ಪುಟಿನ್‌ಗೆ ಹೇಳಿ ಎಂದು ಮೋದಿಗೆ ಕೋರಿದ ಅಮೆರಿಕಮೋದಿ ಅವರು ಪುಟಿನ್ ಸ್ನೇಹಿತರಾದ ಕಾರಣ ಮೋದಿ ಮೊರೆ ಹೋದ ಅಮೆರಿಕಆಗ ಇದು ಯುದ್ಧಗಳ ಯುಗವಲ್ಲ ಎಂದು ಮೋದಿಯಿಂದ ಮನವೊಲಿಕೆಸಂಭಾವ್ಯ ಅನಾಹುತ ತಪ್ಪಿಸಿದ ಭಾರತದ ಪ್ರಧಾನಿ ಮೋದಿ
;Resize=(128,128))
;Resize=(128,128))
;Resize=(128,128))
;Resize=(128,128))