ಸಾರಾಂಶ
ಇಸ್ಲಾಮಾಬಾದ್: ಪಿಪಿಪಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಮಂಗಳವಾರ ಪಾಕಿಸ್ತಾನ ಪ್ರಧಾನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ತಮ್ಮ ಪಕ್ಷವು ಮುಸ್ಲಿಂ ಲೀಗ್‌ನ ಮುಖ್ಯಸ್ಥ ನವಾಜ್ ಶರೀಫ್ ಅವರಿಗೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಅಲ್ಲದೇ ಪಿಪಿಪಿ, ಲೀಗ್ ಜತೆಗೂಡಿ ಸರ್ಕಾರ ರಚಿಸಲು ಸಿದ್ಧವಾಗಿದೆ ಎಂದಿದ್ದಾರೆ. ಹೀಗಾಗಿ ನವಾಜ್ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಾಗಿದೆ.
ನವಾಜ್ ಹಾಗೂ ಭುಟ್ಟೋ ಮಧ್ಯೆ ಪ್ರಧಾನಿ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ ಎಂದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಈ ನಡುವೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಕೆಲವು ಧಾರ್ಮಿಕ ಪಕ್ಷಗಳೊಂದಿಗೆ ಜತೆಗೂಡಿ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಪಾಕಿಸ್ತಾನದ 266 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಹುಮತಕ್ಕೆ 133 ಸ್ಥಾನ ಬೇಕು.
ಇಮ್ರಾನ್ ಖಾನ್ ಅವರ ಪಿಟಿಐ 101, ನವಾಜ್ ಷರೀಫ್ ಅವರ ಪಿಎಂಎನ್-ಎಲ್ ಪಕ್ಷ 75, ಬಿಲಾವಲ್ ಭುಟ್ಟೊ ಅವರ ಪಿಪಿಪಿ ಪಕ್ಷ 54, ಎಂಕ್ಯೂಎಂ-ಪಿ 17 ಹಾಗೂ ಇತರ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಜಯಿಸಿದ್ದಾರೆ.