ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿಯೇ ಜೋ ಬೈಡನ್‌ಗೆ ಕೋವಿಡ್‌-19 ಸೋಂಕು

| Published : Jul 19 2024, 12:50 AM IST / Updated: Jul 19 2024, 04:11 AM IST

ಸಾರಾಂಶ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ಬೈಡನ್‌ಗೆ ಕೊರೊನಾದ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆಂದು ಶ್ವೇತ ಭವನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಲ್ವಾಕೀ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ಬೈಡನ್‌ಗೆ ಕೊರೊನಾದ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆಂದು ಶ್ವೇತ ಭವನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಲಾಸ್‌ ವೇಗಸ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ, ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಿದ ವೇಳೆ ಕೋವಿಡ್ ಇರುವುದು ಧೃಢವಾಗಿದೆ.ಬಳಿಕ ಅವರು ಡೆಲಾವೇರ್‌ಗೆ ಹಿಂದಿರುಗಲಿದ್ದು, ಅಲ್ಲಿಯೇ ಐಸೋಲೆಟ್ ಆಗಲಿದ್ದಾರೆ.‘ಬೈಡನ್ ರೋಗಲಕ್ಷಣಗಳು ಸೌಮ್ಯವಾಗಿವೆ. 

ಉಸಿರಾಟ ದರವು 16ರಷ್ಟಿದೆ. ದೇಹದ ತಾಪಮಾನ 97.8 ರಷ್ಟಿದ್ದು, ನಾಡಿತ ಮಿಡಿತ ಶೇ.97 ರಷ್ಟಿದೆ. ಅಧ್ಯಕ್ಷರು ತಮ್ಮ ಮೊದಲ ಡೋಸ್‌ ಪ್ಯಾಕ್ಸ್ಲೋವಿಡ್‌ ಸ್ವೀಕರಿಸಿದ್ದರು. ತಮ್ಮ ನಿವಾಸ ರೆಹೋಬೋತ್‌ನಲ್ಲಿ ಐಸೋಲೆಟ್ ಆಗಲಿದ್ದಾರೆ’ ಎಂದು ಶ್ವೇತ ಭವನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೈಡನ್ ಕೋವಿಡ್‌ ಲಸಿಕೆ ಮತ್ತು ಬೂಸ್ಟರ್‌ ಡೋಸ್‌ ಲಸಿಕೆಯನ್ನು ಈ ಹಿಂದೆ ಪಡೆದಿದ್ದರು. ಇದೀಗ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.