ರಾಮಕೃಷ್ಣ, ಶಶಿಧರ ಶೆಟ್ಟಿ ಕುಟುಂಬದಿಂದ ಓಮಾನ್‌ನಲ್ಲಿ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಲಾಯಿತು.

ಮಸ್ಕತ್‌: ಒಮಾನ್‌ ದೇಶದಲ್ಲಿರುವ ಕನ್ನಡಿಗರಾದ ಜಿ.ವಿ.ರಾಮಕೃಷ್ಣ ಹಾಗೂ ಶಶಿಧರ್‌ ಶೆಟ್ಟಿ ಮಲ್ಲಾರ್‌ ದಂಪತಿಗಳು ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಿದರು.

ಶ್ರೀವಾರಿ ಫೌಂಡೇಷನ್‌ ಬೆಂಗಳೂರಿನ ವೆಂಕಟೇಶ ಮೂರ್ತಿಯವರು ತಮ್ಮ 6 ಜನ ಸದಸ್ಯರೊಂದಿಗೆ ಬಂದು ಜ. 26 ರಂದು ಮಸ್ಕತ್‌ ನಗರದ ಕೃಷ್ಣ ಮಂದಿರದಲ್ಲಿ ವಿಜೃಂಭಣೆಯಿಂದ ಶ್ರೀ ಶ್ರೀನಿವಾಸ ಕಲ್ಯಾಣವನ್ನು ನೆರವೇರಿಸಿದರು.

ಸುಮಾರು 3000 ಭಕ್ತಾದಿಗಳು ಈ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ತಿರುಮಲದ ಪ್ರಸಾದ ಸ್ವೀಕರಿಸಿದರು. ಇದು ಶ್ರೀವಾರಿ ಫೌಂಡೇಷನ್‌ನ 645ನೇ ಉತ್ಸವ ಹಾಗೂ ಮೊದಲ ಅಂತಾರಾಷ್ಟ್ರೀಯ ಕಲ್ಯಾಣೋತ್ಸವವಾಗಿದೆ. 

ಇದಕ್ಕೆ ಶ್ರೀ ವ್ಯಾಸರಾಜ ಮಠಾಧೀಶರು ಹಾಗೂ ಮಂತ್ರಾಲಯ ಮಠಾಧೀಶರು ಆಶೀರ್ವಚನವನ್ನು ತಮ್ಮ ವಿಡಿಯೋ ಮೂಲಕ ಹಂಚಿಕೊಂಡರು. ಟಿಟಿಡಿ ಬೋರ್ಡ್‌ ಆಫ್‌ ಡೈರೆಕ್ಟರ್‌ ಆದ ಆರ್‌.ವಿ.ದೇಶಪಾಂಡೆ ಹಾಗೂ ಅನಂತ್‌ ಅವರು ಸಂತೋಷವನ್ನು ವ್ಯಕ್ತಪಡಿಸಿದರು.