ಸಾರಾಂಶ
ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಕೇರಳದ ರಷ್ಯಾ ಹೌಸ್‌ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿರುವ ರಷ್ಯನ್ನರು ಮತ್ತು ರಷ್ಯಾ ಪ್ರವಾಸಿಗರು ಬಂದು ಮತ ಚಲಾಯಿಸಿದರು.
ತಿರುವನಂತಪುರಂ: ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಕೇರಳದಲ್ಲೂ ಮತಗಟ್ಟೆ ಸ್ಥಾಪಿಸಲಾಗಿದೆ.
ಹೌದು, ಕೇರಳದಲ್ಲಿರುವ ರಷ್ಯನ್ನರು ಅಥವಾ ಪ್ರವಾಸಕ್ಕಾಗಿ ಬಂದಿರುವ ನಾಗರಿಕರಿಗಾಗಿ ಈ ಮತಗಟ್ಟೆ ಅವಕಾಶ ಕಲ್ಪಿಸಲಾಗಿದೆ.
ರಷ್ಯಾ ಹೌಸ್‌ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಈ ಮತದಾನವು ಮಾ.15-17ರವರೆಗೂ ನಡೆಯಲಿದೆ.
ಹಾಗೆಂದು ಮತದಾನಕ್ಕೆ ಅವಕಾಶ ಕೊಟ್ಟಿದ್ದು ಇದೇ ಮೊದಲಲ್ಲ. ಇದು ಮೂರನೇ ಬಾರಿ.