ಸಾರಾಂಶ
ಮುಂಬೈನ ಮೂರು, ದೆಹಲಿಯ ಎರಡು ಹೋಟೆಲ್‌ಗೆ ಸ್ಥಾನ ಲಭಿಸಿದೆ.
ನವದೆಹಲಿ: ಏಷ್ಯಾದ ಸೆಕೆಂಡ್ ಟಾಪ್ 50 (51-100) ಹೋಟೆಲ್‌ಗಳ ಪಟ್ಟಿಯನ್ನು ವಿಲಿಯಂ ರೀಡ್ ಬ್ಯುಸಿನೆಸ್ ಮೀಡಿಯಾ ಬಿಡುಗಡೆ ಮಾಡಿದ್ದು, ಭಾರತದ 5 ಹೋಟೆಲ್‌ಗಳು ಸ್ಥಾನ ಪಡೆದಿವೆ.
ಅದರಲ್ಲಿ ಮುಂಬೈನ ಅಮೆರಿಕಾನೋ (61), ಬಾಂಬೆ ಕ್ಯಾಂಟೀನ್ (70) ಮತ್ತು ಎಕಾ (98) ಹಾಗೂ ದೆಹಲಿ ದಂ ಪಖ್ತ್ (87) ಮತ್ತು ಗುರುಗ್ರಾಮದ ಕೊಮೊರಿನ್ (79) ಸ್ಥಾನಗಳಿಸಿದ ಭಾರತೀಯ ಹೋಟೆಲ್‌ಗಳಾಗಿವೆ.
ಈ ಪಟ್ಟಿಯಲ್ಲಿ ಜಪಾನ್‌ನ ಟೋಕಿಯೋದ ಎಲ್ ಎಫೆರರ್‌ವೆಸೆನ್ಸ್ ಅಗ್ರಸ್ಥಾನದಲ್ಲಿದ್ದು, ಸಿಂಗಾಪುರ ಮತ್ತು ಟೋಕಿಯೋ ನಗರದಲ್ಲಿ ತಲಾ 8 ಹೋಟೆಲ್‌ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪಟ್ಟಿಯ ಟಾಪ್-50 ಹೋಟೆಲ್‌ಗಳನ್ನು ಮಾ.26ರಂದು ಸಿಯೋಲ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ವೇಳೆ ಪ್ರಕಟಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.