ಇಂದು ಶಹಬಾಜ್‌ ಷರೀಫ್‌ ಪಾಕ್‌ ಪ್ರಧಾನಿಯಾಗಿ ಪ್ರಮಾಣ

| Published : Mar 03 2024, 01:37 AM IST

ಸಾರಾಂಶ

ಇಂದು ಶಹಬಾಜ್‌ ಷರೀಫ್‌ ಪಾಕ್‌ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದ 33ನೇ ಪ್ರಧಾನ ಮಂತ್ರಿಯಾಗಿ ಶಹಬಾಜ್ ಷರೀಫ್‌ ಅವರು ಭಾನುವಾರ (ಮಾ.3) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಹಬಾಜ್‌ ಷರೀಫ್ ತಮ್ಮ ಪಿಎಂಎಲ್‌ ಎನ್‌ ಹಾಗೂ ಮಾಜಿ ಸಚಿವ ಬಿಲಾವಲ್‌ ಭುಟ್ಟೋ ಅವರು ಪಿಪಿಪಿ ಪಕ್ಷದ ಮೈತ್ರಿಕೂಟದಿಂದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಅಧಿಕೃತ ಆಯ್ಕೆಗಾಗಿ ಭಾನುವಾರ ಪಾಕಿಸ್ತಾನ ಸಂಸತ್ತಿನಲ್ಲಿ ಚುನಾವಣೆ ನಡೆಯಲಿದೆ. ಬಳಿಕ ಶಹಬಾಜ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಫೆ.8ರಂದು ನಡೆದು ಚುನಾವಣೆಯಲ್ಲಿ ಶಹಬಾಜ್‌ ಷರೀಫ್ ಅವರ ಪಿಎಂಎಲ್‌ ಎನ್‌ 75 ಸೀಟುಗಳನ್ನು ಗಳಿಸಿತ್ತು. ಬಳಿಕ ಬಿಲಾವಲ್‌ ಭುಟ್ಟೊ ಅವರ ಪಿಪಿಪಿ ಹಾಗೂ ನಾಲ್ಕು ಪಕ್ಷಗಳ ಜೊತೆ ಹಲವು ಸುತ್ತಿನ ಮಾತುಕತೆ ಮೂಲಕ ಕೊನೆಗೆ ಶಹಬಾಜ್‌ ಷರೀಫ್‌ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಇದಕ್ಕೆ ಪ್ರತ್ಯುಪಕಾರವಾಗಿ ಪಿಪಿಪಿ ಪಕ್ಷದ ಆಸಿಫ್‌ ಅಲಿ ಜರ್ಧಾರಿ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಂಡಿದೆ.