ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯನ್ನು ಖಂಡಿಸಿ ಕೆನಡಾದ ವಿವಿಧ ಭಾರತೀಯ ಕಾನ್ಸುಲೇಟ್‌ ಕಚೇರಿಗಳ ಮುಂದೆ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಟೊರೊಂಟೊ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಖಂಡಿಸಿ, ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ಸದಸ್ಯರು ಸತತ 2ನೇ ದಿನವಾದ ಭಾನುವಾರವೂ ಟೊರಾಂಟೋ ಮತ್ತು ವ್ಯಾಂಕೋವರ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಆದರೆ ಶನಿವಾರ ಮತ್ತು ಭಾನುವಾರ ಕಚೇರಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅವರ ಪ್ರತಿಭಟನೆ ಕಚೇರಿ ಕೆಲಸಗಳ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ.

ಇದಕ್ಕೂ ಮೊದಲು ಶುಕ್ರವಾರ ಸಂಜೆ ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಸಂಜಯ್‌ ಕುಮಾರ್‌ ವರ್ಮಾ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದಕ್ಕೂ ಖಲಿಸ್ತಾನಿ ಉಗ್ರರು ಅಡ್ಡಿಪಡಿಸಿ ಅವರೇ ತಮ್ಮ ಅಂತಿಮ ಗುರಿ ಎಂದು ಘೋಷಿಸಿದ್ದರು.