ಸಾರಾಂಶ
ಓಪನ್ ಎಐ ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನ ಸಂಶೋಧಕರಾಗಿ ಕೆಲಸ ಮಾಡಿದ್ದ ಹಾಗೂ ಆ ಕಂಪನಿ ವಿರುದ್ಧವೇ ದನಿ ಎತ್ತಿದ್ದ 26 ವರ್ಷದ ಭಾರತೀಯ ಮೂಲದ ಸುಚಿರ್ ಬಾಲಾಜಿ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ
ವಾಷಿಂಗ್ಟನ್: ಓಪನ್ ಎಐ ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನ ಸಂಶೋಧಕರಾಗಿ ಕೆಲಸ ಮಾಡಿದ್ದ ಹಾಗೂ ಆ ಕಂಪನಿ ವಿರುದ್ಧವೇ ದನಿ ಎತ್ತಿದ್ದ 26 ವರ್ಷದ ಭಾರತೀಯ ಮೂಲದ ಸುಚಿರ್ ಬಾಲಾಜಿ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ನ.26ರಂದು ಸುಚಿರ್ ದೇಹವು ಅವರ ಬುಕಾನನ್ ಸ್ಟ್ರೀಟ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.
2020ರ ನವೆಂಬರ್‌ನಿಂದ 2024ರ ಆಗಸ್ಟ್ ತನಕ ಸುಚಿರ್ ಓಪನ್ ಎಐ ನಲ್ಲಿ ಕೆಲಸ ಮಾಡಿದ್ದರು. ಒಂದೂವರೆ ವರ್ಷಗಳ ಕಾಲ ಜಾಟ್‌ಜಿಪಿಟಿಯಲ್ಲಿ ಕೆಲಸ ಮಾಡಿದ್ದರು.
ಸುಚಿರ್ ದನಿ ಎತ್ತಿದ್ದೇಕೆ?:
ಅಕ್ಟೋಬರ್‌ನಲ್ಲಿ ‘ಓಪನ್ ಎಐ’ ಹಕ್ಕು ಸ್ವಾಮ್ಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಚಾಟ್ ಜಿಪಿಟಿಯಂತಹ ತಂತ್ರಜ್ಞಾನಗಳು ಅಂತರ್ಜಾಲವನ್ನು ಹಾನಿಗೊಳಿಸುತ್ತದೆ ಎಂದು ಸುಚಿರ್ ಆರೋಪಿಸಿದ್ದರು. ಅದರ ಬೆನ್ನಲ್ಲೇ ಅವರ ಶವ ಪತ್ತೆಯಾಗಿದೆ.
ಇದಕ್ಕೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿ, ಸುಚಿರ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
)
;Resize=(128,128))
;Resize=(128,128))
;Resize=(128,128))