ಆಫ್ಘಾನಿಸ್ತಾನದಲ್ಲಿ ಗುಂಡು ಹಾರಿಸಿ ಮರಣದಂಡನೆ ಜಾರಿ!

| Published : Feb 23 2024, 01:47 AM IST / Updated: Feb 23 2024, 08:43 AM IST

ಆಫ್ಘಾನಿಸ್ತಾನದಲ್ಲಿ ಗುಂಡು ಹಾರಿಸಿ ಮರಣದಂಡನೆ ಜಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ ಮಾಡಿದವರಿಗೆ ಸಾರ್ವಜನಿಕರ ಎದುರೇ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಮತ್ತೊಮ್ಮೆ ಷರಿಯಾ ಕಾನೂನು ಜಾರಿ ಮಾಡುವ ಗುಣಲಕ್ಷಣಗಳನ್ನು ತೋರಿಸಿದೆ.

ಘಜ್ನಿ: ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಬ್ಬರನ್ನು ಸಾರ್ವಜನಿಕವಾಗಿಯೇ ಗುಂಡಿಟ್ಟು ಹತ್ಯೆ ಮಾಡಿ ಮರಣದಂಡನೆ ಶಿಕ್ಷೆ ಜಾರಿ ಮಾಡಿದ ಭೀಕರ ಘಟನೆ ಆಫ್ಘಾನಿಸ್ತಾನದಲ್ಲಿ ನಡೆದಿದೆ.

 ಹೀಗಾಗಿ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

ಶಿಕ್ಷೆಗೆ ಗುರಿಯಾದ ಇಬ್ಬರು, ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳು ಎಂದು ತಾಲಿಬಾನ್ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. 

ಇದಾದ ಬಳಿಕ ತಾಲಿಬಾನ್‌ನ ಅತ್ಯುನ್ನತ ನಾಯಕನಾದ ಹಿಬಾತ್‌ ಉಲ್ಲಾ ಅಖುಂಡ್‌ಜಾದಾ ಇಬ್ಬರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದ.

 ಹೀಗಾಗಿ ಗುರುವಾರ ಇವರಿಬ್ಬರಿಗೂ ಅಲಿ ಲಲಾ ಪ್ರದೇಶದಲ್ಲಿರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮರಣದಂಡನೆ ವಿಧಿಸಲಾಯಿತು.

ಈ ವೇಳೆ ಅಪರಾಧಿಗಳ ಕುಟುಂಬದವರು ಮರಣದಂಡನೆಯಿಂದ ವಿನಾಯ್ತಿ ನೀಡುವಂತೆ ಮನವಿ ಮಾಡಿದರೂ ಸಹ ಇದನ್ನು ತಿರಸ್ಕರಿಸಿ ಇಬ್ಬರಿಗೂ ಗುಂಡು ಹಾರಿಸಲಾಗಿದೆ. 

2021ರಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡಾಗಿನಿಂದ ಇದು 4ನೇ ಸಾರ್ವಜನಿಕ ಮರಣದಂಡನೆಯ ಪ್ರಕರಣವಾಗಿದೆ. 

1990ಕ್ಕೂ ಮೊದಲು ತಾಲಿಬಾನ್‌ ಅಧಿಕಾರದಲ್ಲಿದ್ದಾಗ, ಕಲ್ಲು ಹೊಡೆದು ಕೊಲೆ ಮಾಡುವ ಮೂಲಕ ಮರಣದಂಡನೆ ವಿಧಿಸಲಾಗುತ್ತಿತ್ತು.