ಹಸೀನಾರ ತಕ್ಷಣದ ರಾಜಾಶ್ರಯ ಬೇಡಿಕೆಗೆ ಬ್ರಿಟನ್‌ ತಿರಸ್ಕಾರ? ಮುಂದಿನ ಆಯ್ಕೆ ಯಾವುದು?

| Published : Aug 07 2024, 01:09 AM IST / Updated: Aug 07 2024, 08:10 AM IST

ಹಸೀನಾರ ತಕ್ಷಣದ ರಾಜಾಶ್ರಯ ಬೇಡಿಕೆಗೆ ಬ್ರಿಟನ್‌ ತಿರಸ್ಕಾರ? ಮುಂದಿನ ಆಯ್ಕೆ ಯಾವುದು?
Share this Article
  • FB
  • TW
  • Linkdin
  • Email

ಸಾರಾಂಶ

: ಬ್ರಿಟಿಷ್ ವಲಸೆ ನಿಯಮಗಳ ಪ್ರಕಾರ ತಾತ್ಕಾಲಿಕ ಆಶ್ರಯ ಬಯಸಿ ಬರುವವರಿಗೆ ಆಸರೆಯಾಗಲು ಸಾಧ್ಯವಿಲ್ಲ ಎಂದು ಬ್ರಿಟನ್‌ನ ಗೃಹ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ‘ಆಶ್ರಯ ಬಯಸಿ ಬರುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಈ ಬೇಡಿಕೆ ಇಡಬೇಕು’ ಎಂದು ಕೀರ್ ಸ್ಟಾರ್ಮ ನೇತೃತ್ವದ ಸರ್ಕಾರ ಹೇಳಿದೆ.

ನವದೆಹಲಿ: ಬ್ರಿಟಿಷ್ ವಲಸೆ ನಿಯಮಗಳ ಪ್ರಕಾರ ತಾತ್ಕಾಲಿಕ ಆಶ್ರಯ ಬಯಸಿ ಬರುವವರಿಗೆ ಆಸರೆಯಾಗಲು ಸಾಧ್ಯವಿಲ್ಲ ಎಂದು ಬ್ರಿಟನ್‌ನ ಗೃಹ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ‘ಆಶ್ರಯ ಬಯಸಿ ಬರುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಈ ಬೇಡಿಕೆ ಇಡಬೇಕು’ ಎಂದು ಕೀರ್ ಸ್ಟಾರ್ಮ ನೇತೃತ್ವದ ಸರ್ಕಾರ ಹೇಳಿದೆ. ಬಾಂಗ್ಲಾ ತೊರೆದು ದೆಹಲಿಗೆ ಬಂದಿಳಿದಿರುವ ಹಸೀನಾ ಲಂಡಂನ್‌ಗೆ ಹಾರಬಹುದು ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

‘ಅಗತ್ಯವಿರುವವರಿಗೆ ರಕ್ಷಣೆ ಒದಗಿಸಿರುವ ಖ್ಯಾತಿಯನ್ನು ಬ್ರಿಟನ್‌ ಹೊಂದಿದೆ. ಆದರೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ರಕ್ಷಣೆ ಬಯಸುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಆಶ್ರಯ ಪಡೆಯುವುದು ಸೂಕ್ತ ಹಾಗೂ ಸುರಕ್ಷಿತ’ ಎಂದು ಬ್ರಿಟನ್‌ ಗೃಹ ಕಚೇರಿಯ ವಕ್ತಾರರು ಹೇಳಿದ್ದಾರೆ.

ಆದರೆ ಇಂಥ ಹೇಳಿಕೆಯ ಹೊರತಾಗಿಯೂ ರಾಜಾಶ್ರಯ ಕೋರಿದ ಹಸೀನಾ ಬೇಡಿಕೆಯನ್ನು ಬ್ರಿಟನ್‌ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಬ್ರಿಟನ್‌ ಪ್ರವೇಶ ನಿರಾಕರಿಸಿದರೆ ಹಸೀನಾ ಮುಂದಿನ ಆಯ್ಕೆ ಯಾವುದು?

ಢಾಕಾ: ರಾಜೀನಾಮೆ ಬಳಿಕ ಬಾಂಗ್ಲಾದೇಶ ಬಿಟ್ಟಿರುವ ಹಸೀನಾ ಸದ್ಯ ಸುರಕ್ಷಿತ ದೇಶದ ಆಶ್ರಯಕ್ಕೆ ಎದುರು ನೋಡುತ್ತಿದ್ದಾರೆ. ಸದ್ಯ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಹಸೀನಾ ಲಂಡನ್‌ಗೆ ಹೋಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಒಂದು ವೇಳೆ ಶೇಖ್ ಹಸೀನಾರಿಗೆ ಬ್ರಿಟನ್ ಅನುಮತಿ ನೀಡದಿದ್ದಲ್ಲಿ, ಅವರು ಕೆಲ ಬೇರೆ ದೇಶಗಳತ್ತ ಮುಖ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ಇದರ ಜೊತೆಗೆ ಯುಎಇ, ಫಿನ್ಲೆಂಡ್‌ ,ಬೆಲ್ಜಿಯಂ ದೇಶಗಳಿಗೆ ಹಸೀನಾ ತೆರಳಬಹುದು ಎನ್ನಲಾಗುತ್ತಿದೆ.

ಹಸೀನಾರ ವೀಸಾ ಹಿಂಪಡೆದ ಅಮೆರಿಕವಾಷಿಂಗ್ಟನ್‌: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಶ್ರಯ ಬಯಸಿ ಭಾರತಕ್ಕೆ ಬಂದಿರುವ ಶೇಖ್‌ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಕೆಲ ಪಾಶ್ಚಿಮಾತ್ಯ ದೇಶಗಳು ಆಕೆಯನ್ನು ಅಧಿಕಾರದಿಂದ ಕಿತ್ತೆಸೆಯಲು ಬಯಸುತ್ತಿದ್ದ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ. ಸದ್ಯ ಭಾರತದಲ್ಲಿರುವ ಹಸೀನಾ ಯುರೋಪಿಯನ್‌ ದೇಶಗಳಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ.