ಸ್ಟಾರ್ಮರ್‌ಗೆ ಮೋದಿ ಅಭಿನಂದನೆ, ಸುನಕ್‌ಗೆ ಧನ್ಯವಾದ

| Published : Jul 06 2024, 12:46 AM IST / Updated: Jul 06 2024, 04:40 AM IST

modi rishi
ಸ್ಟಾರ್ಮರ್‌ಗೆ ಮೋದಿ ಅಭಿನಂದನೆ, ಸುನಕ್‌ಗೆ ಧನ್ಯವಾದ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟನ್‌ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಕ್ಕಾಗಿ ಲೇಬರ್‌ನ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ .

ನವದೆಹಲಿ: ಬ್ರಿಟನ್‌ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಕ್ಕಾಗಿ ಲೇಬರ್‌ನ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ .‘ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಗಮನಾರ್ಹ ವಿಜಯಕ್ಕಾಗಿ ಕೀರ್ ಸ್ಟಾರ್ಮರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. 

ಭಾರತ-ಬ್ರಿಟನ್‌ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಮತ್ತಷ್ಟು ಬಲಪಡಿಸಲು, ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಮ್ಮ ಸಕಾರಾತ್ಮಕ ಮತ್ತು ರಚನಾತ್ಮಕ ಸಹಯೋಗವನ್ನು ನಾನು ಎದುರು ನೋಡುತ್ತಿದ್ದೇನೆ‘ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.ಇದೇ ವೇಳೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಬಗ್ಗೆಯೂ ಟ್ವೀಟ್‌ ಮಾಡಿರುವ ಅವರು, ‘ಶ್ಲಾಘನೀಯ ನಾಯಕತ್ವಕ್ಕಾಗಿ ರಿಷಿ ಸುನಕ್ ಅವರಿಗೆ ಧನ್ಯವಾದಗಳು ಮತ್ತು ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಬ್ರಿಟನ್‌ ನಡುವಿನ ಸಂಬಂಧವನ್ನು ಗಾಢವಾಗಿಸಲು ನಿಮ್ಮ ಸಕ್ರಿಯ ಕೊಡುಗೆ ಇದೆ’ ಎಂದಿದ್ದಾರೆ.

ಸುನಕ್‌ಗೆ ಜಯ, ಲಿಸ್‌ ಟ್ರಸ್‌ಗೆ ಸೋಲು

ಲಂಡನ್‌: ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋಲು ಅನುಭವಿಸಿದ್ದರೂ ಹಾಲಿ ಪ್ರಧಾನಿ ರಿಷಿ ಸುನಕ್‌ ಜಯಗಳಿಸಿದ್ದಾರೆ. ಆದರೆ ಅವರಿಗೂ ಮುನ್ನ ಪ್ರಧಾನಿ ಆಗಿದ್ದ ಲಿಸ್ ಟ್ರಸ್‌ ಸೋಲು ಅನುಭವಿಸಿದ್ದಾರೆ.ಸುನಕ್‌ ಅವರು ರಿಚ್ಮಂಡ್‌-ನಾರ್ಥ್‌ ಅಲರ್ಟನ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ 23,059 ಮತಗಳಿಂದ ಗೆದ್ದಿದ್ದಾರೆ.ಆದರೆ ಅವರಿಗೂ ಮುನ್ನ 45 ದಿನ ಪ್ರಧಾನಿ ಆಗಿ ವಿವಾದಾತ್ಮಕ ದಿನಗಳನ್ನು ಕಳೆದಿದ್ದ ಲಿಸ್‌ ಟ್ರಸ್ ಅವರು ನೈಋತ್ಯ ವೆಸ್ಟ್‌ ನಾರ್ಫಾಕ್‌ನಲ್ಲಿ ಲೇಬರ್‌ ಪಕ್ಷದ ಟೆರ್ರಿ ಜೆಮ್ಮಿ ಅವರ ಮುಂದೆ 630 ಮತದಿಂದ ಸೋಲುಂಡಿದ್ದಾರೆ.