ಮನೆಯಿಂದ ಮನೆಗೆ ಟೆರೇಸ್‌ ಮೇಲೆ ಜಿಗಿಯುತ್ತಾ ಬಂದಿದ್ದ ಹಂತಕ!

| Published : Jul 15 2024, 01:53 AM IST / Updated: Jul 15 2024, 04:10 AM IST

ಮನೆಯಿಂದ ಮನೆಗೆ ಟೆರೇಸ್‌ ಮೇಲೆ ಜಿಗಿಯುತ್ತಾ ಬಂದಿದ್ದ ಹಂತಕ!
Share this Article
  • FB
  • TW
  • Linkdin
  • Email

ಸಾರಾಂಶ

ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರದ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ ಗನ್‌ ಹಿಡಿದ ಯುವಕ ಥಾಮಸ್‌ ಮ್ಯಾಥ್ಯೂ ಕ್ರುಕ್ಸ್‌ ಆ ಸ್ಥಳಕ್ಕೆ ಹೇಗೆ ಬಂದ ಎಂಬುದೇ ತಿಳಿಯುತ್ತಿಲ್ಲ ಎಂದು ಭದ್ರತಾ ಪಡೆಗಳು ಹೇಳಿವೆ.

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರದ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ ಗನ್‌ ಹಿಡಿದ ಯುವಕ ಥಾಮಸ್‌ ಮ್ಯಾಥ್ಯೂ ಕ್ರುಕ್ಸ್‌ ಆ ಸ್ಥಳಕ್ಕೆ ಹೇಗೆ ಬಂದ ಎಂಬುದೇ ತಿಳಿಯುತ್ತಿಲ್ಲ ಎಂದು ಭದ್ರತಾ ಪಡೆಗಳು ಹೇಳಿವೆ. ಆದರೆ, ಇಬ್ಬರು ಪ್ರತ್ಯಕ್ಷದರ್ಶಿಗಳು ತಾವು ಹಂತಕನನ್ನು ನೋಡಿದ್ದಾಗಿ ಹೇಳಿದ್ದು, ಅವರಲ್ಲಿ ಒಬ್ಬರು, ಮನೆಯಿಂದ ಮನೆಗೆ ಟೆರೇಸ್‌ ಮೇಲೆ ಜಿಗಿಯುತ್ತಾ ಯುವಕ ಬಂದಿದ್ದನ್ನು ನೋಡಿದೆ ಎಂದಿದ್ದಾರೆ.

ಟೆರೇಸ್‌ ಮೇಲೆ ಜಿಗಿಯುತ್ತಾ ಬಂದ ಯುವಕ, ಟ್ರಂಪ್‌ ಭಾಷಣ ಮಾಡುತ್ತಿದ್ದ ಸ್ಥಳದಿಂದ 200ರಿಂದ 250 ಅಡಿ ದೂರದಲ್ಲಿರುವ ಉತ್ಪಾದನಾ ಘಟಕದ ಟೆರೇಸ್‌ ಮೇಲೆ ಮಲಗಿಕೊಂಡು ಶೂಟ್‌ ಮಾಡಿದ್ದಾನೆ. ಆತ ಟೆರೇಸ್‌ ಮೇಲೆ ಬೂದು ಬಣ್ಣದ ಜಾಕೆಟ್‌ ಧರಿಸಿ ಗನ್‌ ಹಿಡಿದು ಮಲಗಿರುವುದು ಸೋಷಿಯಲ್‌ ಮೀಡಿಯಾದಲ್ಲಿರುವ ವಿಡಿಯೋ ಒಂದರಲ್ಲಿ ಕಾಣಿಸುತ್ತದೆ.

ಫೈಟ್‌ ಎಂದು ಅಬ್ಬರಿಸಿದ ಟ್ರಂಪ್‌!

ವಾಷಿಂಗ್ಟನ್‌: ತಮ್ಮ ಹತ್ಯೆಗೆ ಯತ್ನ ನಡೆದಿದ್ದರೂ ಡೊನಾಲ್ಡ್‌ ಟ್ರಂಪ್‌ ಎದೆಗುಂದದೇ ‘ಫೈಟ್‌’ ಎಂದು ಅಬ್ಬರಿಸಿದ್ದು ವಿಶೇಷ. ಟ್ರಂಪ್‌ರ ಈ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಗುಂಡುಗಳು ಹಾರುತ್ತಿದ್ದಂತೆ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಜನರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದರು. ರಕ್ತಸಿಕ್ತ ಮುಖದ ಟ್ರಂಪ್‌ ಅವರನ್ನು ಭದ್ರತಾ ಪಡೆಯವರು ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ, ಕಿವಿಯಿಂದ ರಕ್ತ ಸೋರುತ್ತಿದ್ದರೂ ತಮ್ಮ ಮುಷ್ಟಿ ಕಟ್ಟಿದ ಕೈಯನ್ನು ಮೇಲಕ್ಕೆತ್ತಿ ‘ಫೈಟ್‌! (ಹೋರಾಡಿ) ಎಂದು ಟ್ರಂಪ್‌ ಅಬ್ಬರಿಸಿದರು. ನಂತರ ಅವರನ್ನು ಕಾರಿನಲ್ಲಿ ಪಿಟ್ಸ್‌ಬರ್ಗ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಟ್ರಂಪ್‌ ‘ನನಗೆ ಶೂ ಹಾಕಿಕೊಳ್ಳಲು ಬಿಡಿ’ ಎಂದು ಕಿರುಚಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.