ಇವಿಗಳು ಪೆಟ್ರೋಲ್‌ ವಾಹನಕ್ಕಿಂತ 850 ಪಟ್ಟು ಹೆಚ್ಚು ಮಾಲಿನ್ಯಕರ!

| Published : Mar 07 2024, 01:54 AM IST / Updated: Mar 07 2024, 12:13 PM IST

ಸಾರಾಂಶ

ವಿಶ್ವಾದ್ಯಂತ ಜಾಗತಿಕ ತಾಪಮಾನ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್‌ ಡೀಸೆಲ್‌ ಇಂಧನದ ವಾಹನಗಳನ್ನು ಬದಿಗೊತ್ತಿ ಎಲೆಕ್ಟ್ರಿಕ್‌ ವಾಹನ ಬಳಕೆ ಶುರು ಮಾಡಿದ್ದಾರೆ.

ನವದೆಹಲಿ: ವಿಶ್ವಾದ್ಯಂತ ಜಾಗತಿಕ ತಾಪಮಾನ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್‌ ಡೀಸೆಲ್‌ ಇಂಧನದ ವಾಹನಗಳನ್ನು ಬದಿಗೊತ್ತಿ ಎಲೆಕ್ಟ್ರಿಕ್‌ ವಾಹನ ಬಳಕೆ ಶುರು ಮಾಡಿದ್ದಾರೆ. ಆದರೆ ವರದಿಯೊಂದು ಎಲೆಕ್ಟ್ರಿಕ್‌ ವಾಹನಗಳು 1850 ಪಟ್ಟು ಹೆಚ್ಚು ಮಲೀನ ಮಾಡುತ್ತವೆ ಎಂದು ವರದಿಯೊಂದು ಹೇಳಿದೆ.

ಎಮಿಷನ್‌ ಅನಾಲಿಟಿಕ್ಸ್‌ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಇವಿಗಳ ಬ್ಯಾಟರಿ ಸಾಮಾನ್ಯ ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳಿಂದ ಅಧಿಕ ಭಾರವಾಗಿರುತ್ತದೆ. 

ಈ ಬ್ಯಾಟರಿಗಳ ಭಾರ ನೇರವಾಗಿ ವಾಹನದ ಬ್ರೇಕ್‌ ಹಾಗೂ ಚಕ್ರಗಳ ಮೇಲೆ ಬೀಳಲಿದೆ. ಇದರಿಂದಾಗಿ ಕಚ್ಚಾತೈಲದಿಂದ ಮಾಡಲ್ಪಟ್ಟ ಸಿಂಥೆಟಿಕ್‌ ರಬ್ಬರ್‌ ಚಕ್ರಗಳು ಬೇಗ ಸವೆಯುತ್ತದೆ. 

ಈ ಪ್ರಕ್ರಿಯೆಯಲ್ಲಿ ಅವುಗಳು ಹಾನಿಕಾರಕ ಕಣಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತವೆ.ಟೆಸ್ಲಾ ವೈ ಮಾಡೆಲ್‌ ಹಾಗೂ ಫಾರ್ಡ್‌ ಎಫ್‌-150 ಕಾರಿನಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 

ಎಲೆಕ್ಟ್ರಿಕ್‌ ವಾಹನಗಳ ಟೈಯರ್‌ಗಳಿಂದ ಹೊರಸೂಸಲ್ಪಡುವ ರಾಸಾಯನಿಕವು ಪೆಟ್ರೋಲ್‌ ಕಾರಿನಿಂದ ಹೊರಹೋಗುವ ಹೊಗೆಗಿಂತ 400 ಪಟ್ಟು ಅಧಿಕವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.