ಸಾರಾಂಶ
ನವದೆಹಲಿ: ರೈಲು ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಅಂಗಾಂಗ ದಾನ ಮಾಡಿದ ಮಹಿಳೆಯೊಬ್ಬರ ಎರಡು ಕೈಗಳನ್ನು ಏಕಕಾಲಕ್ಕೆ ಜೋಡಿಸಿ ದೆಹಲಿ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ದೆಹಲಿಯ ಗಂಗಾರಾಮ್ ಆಸ್ಪತ್ರೆಯ ವೈದ್ಯರ ಈ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಏನಾಗಿತ್ತು?
ರಾಜ್‌ಕುಮಾರ್ ಎಂಬ ವ್ಯಕ್ತಿ ತಮ್ಮ ಮನೆಯ ಬಳಿ ಇರುವ ರೈಲ್ವೆ ಹಳಿಯನ್ನು ಬೈಕ್ ಮೂಲಕ ದಾಟುವಾಗ ನಿಯಂತ್ರಣ ತಪ್ಪಿ ಬಿದ್ದಾಗ ಅವರ ಮೇಲೆ ರೈಲು ಹರಿದು ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಬಳಿಕ ಅವರಿಗೆ ಕೃತಕ ಕೈ ಅಳವಡಿಸಲಾಗಿತ್ತು. 
2023ರಲ್ಲಿ ಗಂಗಾರಾಂ ಆಸ್ಪತ್ರೆಯಲ್ಲಿ ಕೈಗಳ ಅಂಗ ಕಸಿ ಮಾಡಲು ಅನುಮತಿ ಸಿಕ್ಕಿತ್ತು. ಈ ನಡುವೆ ಕೆಲ ದಿನಗಳ ಹಿಂದೆ ಮೀನಾ ಮೆಹ್ತಾ ಎಂಬ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಕಾರಣ ಅವರ ಅಂಗಾಂಗಳನ್ನು ದಾನ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದರು.
ಅವರ ಕೈಗಳು ರಾಜ್‌ಕುಮಾರ್ ಅವರಿಗೆ ಸರಿಹೊಂದುತ್ತಿದ್ದ ಕಾರಣ ರಾಜ್‌ಕುಮಾರ್ ಅವರ ದೇಹದ ಭುಜಕ್ಕೆ ಹೊಂದಿಕೊಂಡಿರುವ ಪ್ರತಿಯೊಂದು ಸ್ನಾಯು, ಸ್ನಾಯುರಜ್ಜು ಮತ್ತು ಅಪಧಮನಿಯೊಂದಿಗೆ ಸೂಕ್ಷ್ಮವಾಗಿ ಜೋಡಿಸುವ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಜ.19ರಂದು ವೈದರ ತಂಡ ಸತತ 12 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ರಾಜ್‌ಕುಮಾರ್‌ಗೆ ಮರುಜನ್ಮ ನೀಡಿದೆ. ಬಳಿಕ ಪೇಂಟರ್ ತನ್ನ ಎರಡೂ ಕೈಗಳನ್ನು ಎತ್ತಿ ವಿಜಯದ ಸಂಕೇತ ತೋರಿಸಿದ ಚಿತ್ರ ವೈರಲ್ ಆಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))