ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‍ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್‌ ಸಾಲ ಕೊಡಿಸಲು ನೆರವಾಗುವ ಷರತ್ತು ಹಾಕಿ ಕದನವಿರಾಮಕ್ಕೆ ಒಪ್ಪಿಸಿದರು ಎಂದು ತಿಳಿದುಬಂದಿದೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‍ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್‌ ಸಾಲ ಕೊಡಿಸಲು ನೆರವಾಗುವ ಷರತ್ತು ಹಾಕಿ ಕದನವಿರಾಮಕ್ಕೆ ಒಪ್ಪಿಸಿದರು ಎಂದು ತಿಳಿದುಬಂದಿದೆ.ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಪಾಕ್‌ ಸ್ಥಿತಿ ಸಂಕಷ್ಟದಲ್ಲಿದೆ.

 ಹೀಗಾಗಿ ಅದು ಸುಮಾರು 25000 ಕೋಟಿ ರು. ಸಾಲಕ್ಕೆ ಬೇಡಿಕೆ ಇರಿಸಿತ್ತು. ‘ಈ ಪೈಕಿ ಮೊದಲ ಕಂತು 8500 ಕೋಟಿ ರು. ಬಿಡುಗಡೆ ಆಗಬೇಕಾದರೆ ನಾವು ಸಹಾಯ ಮಾಡುತ್ತೇವೆ. ಮೊದಲು ಕದನವಿರಾಮಕ್ಕೆ ಒಪ್ಪಿ’ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ಗೆ ಟ್ರಂಪ್‌ ಒತ್ತಡ ಹೇರಿದರು ಎನ್ನಲಾಗಿದೆ. 

ವಿಧಿಯಿಲ್ಲದೇ ಇದಕ್ಕೆ ಸಮ್ಮತಿಸಿದ ಷರೀಫ್‌ ಕದನವಿರಾಮಕ್ಕೆ ಸಮ್ಮತಿಸಿದರು ಎನ್ನಲಾಗಿದೆ.ಇದೇ ವೇಳೆ ಇನ್ನೂ ಸುಮಾರು 1.7 ಲಕ್ಷ ರು. ಹಣ ಪಾಕ್‌ಗೆ ಬರಬೇಕಿದೆ. ಉಳಿದ ಹಣ ಪಾಕಿಸ್ತಾನವು ಉಗ್ರವಾದ ಹತ್ತಿಕ್ಕುವ ವಿಚಾರದಲ್ಲಿ ಯಾವ ಅನುಸರಣೆ ತಾಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಮೂಲಗಳು ಹೇಳಿವೆ.