₹180 ಕೋಟಿ ನಿಧಿ ಬಗ್ಗೆ ಮತ್ತೆ ಸ್ಫೋಟಕ ಆರೋಪ : ಭಾರತಕ್ಕೆ ಬೈಡೆನ್‌ ನೀಡಿದ್ದು ಕಿಕ್‌ಬ್ಯಾಕ್‌ - ಟ್ರಂಪ್‌ ಬಾಂಬ್‌

| N/A | Published : Feb 21 2025, 11:46 PM IST / Updated: Feb 22 2025, 04:06 AM IST

Donald Trump
₹180 ಕೋಟಿ ನಿಧಿ ಬಗ್ಗೆ ಮತ್ತೆ ಸ್ಫೋಟಕ ಆರೋಪ : ಭಾರತಕ್ಕೆ ಬೈಡೆನ್‌ ನೀಡಿದ್ದು ಕಿಕ್‌ಬ್ಯಾಕ್‌ - ಟ್ರಂಪ್‌ ಬಾಂಬ್‌
Share this Article
  • FB
  • TW
  • Linkdin
  • Email

ಸಾರಾಂಶ

 ಸ್ಫೋಟಕ ಆರೋಪ ಮಾಡಿದ ಮರುದಿನವೂ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಕಿಕ್‌ಬ್ಯಾಕ್ ಸ್ಕೀಂ’ (ಲಂಚದ ಯೋಜನೆ) ಎಂದು ಹೇಳಿದ್ದಾರೆ. ಅಲ್ಲದೆ, ‘ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ’ ಎಂದಿದ್ದಾರೆ.

 ವಾಷಿಂಗ್ಟನ್‌: ‘180 ಕೋಟಿ ರು. ನಿಧಿ ಮೂಲಕ ಭಾರತದ ಚುನಾವಣೆಗಳ ಮೇಲೆ ಈ ಹಿಂದಿನ ಸರ್ಕಾರ ಪ್ರಭಾವ ಬೀರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಯತ್ನಿಸಿತ್ತು’ ಎಂದು ಸ್ಫೋಟಕ ಆರೋಪ ಮಾಡಿದ ಮರುದಿನವೂ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಕಿಕ್‌ಬ್ಯಾಕ್ ಸ್ಕೀಂ’ (ಲಂಚದ ಯೋಜನೆ) ಎಂದು ಹೇಳಿದ್ದಾರೆ. ಅಲ್ಲದೆ, ‘ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ’ ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿ ರಿಪಬ್ಲಿಕನ್ ಗವರ್ನರ್ ಅಸೋಸಿಯೇಷನ್‌ ಸಭೆಯಲ್ಲಿ ಗುರುವಾರ ಮಾತನಾಡಿದ ಟ್ರಂಪ್‌, ‘ಭಾರತದಲ್ಲಿ ಮತದಾನ ವ್ಯವಸ್ಥೆ ಸುಧಾರಣೆಗೆ ಅಮೆರಿಕ 180 ಕೋಟಿ ರು. ನೀಡಿತ್ತು. ಆ ಹಣ ನೀಡುವವರು ಜನರತ್ತ ಆ ಹಣವನ್ನು ‘ಕಿಕ್‌’ ಮಾಡುತ್ತಿದ್ದರು. ನಂತರ ತಮಗೆ ಬೇಕಾದುದನ್ನು ‘ವಾಪಸ್’ (ಬ್ಯಾಕ್‌) ಪಡೆಯುತ್ತಿದ್ದರು. ಹೀಗಾಗಿ ಇದೊಂದು ಕಿಕ್‌ ಬ್ಯಾಕ್‌ ಯೋಜನೆ. ಆದರೆ ನಿಜವಾಗಿ ಏನು ನಡೆಯುತ್ತಿದೆ ಎಂದು ಯಾರಿಗೂ ಬಹಿರಂಗವಾಗಿ ಗೊತ್ತಾಗುತ್ತಿರಲಿಲ್ಲ’ ಎಂದು ಕುಟುಕಿದರು.

‘ಆ ಎಲ್ಲಾ ಹಣ ಭಾರತಕ್ಕೆ ಹೋದಾಗ ‘ಅವರು’ (ಬೈಡೆನ್‌ ಸರ್ಕಾರ) ಅದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಯೋಚಿಸುತ್ತಿದ್ದರು ಎಂಬ ವಿಚಾರ ತಿಳಿದು ನನಗೆ ಅಚ್ಚರಿ ಆಗುತ್ತದೆ’ ಎಂದ ಟ್ರಂಪ್‌, ‘ನಾವು ಈ ಹಣವನ್ನು ಭಾರತದ ಮತದಾನಕ್ಕೆ ಏಕೆ ನೀಡಬೇಕು? ನಮಗೆ ನಮ್ಮದೇ ಆದ ಸಮಸ್ಯೆಗಳಿವೆ’ ಎಂದರು.

ಟ್ರಂಪ್‌ ಅವರು ಈ ಚುನಾವಣಾ ನಿಧಿ ಬಗ್ಗೆ ಮಾತನಾಡುತ್ತಿರುವುದು 3ನೇ ಸಲ ಎಂಬುದು ಇಲ್ಲಿ ಗಮನಾರ್ಹ.

ಹಣ ಹೋಗಿದ್ದು ಬಾಂಗ್ಲಾದೇಶಕ್ಕೆ, ನಮಗಲ್ಲ: ಫ್ಯಾಕ್ಟ್‌ಚೆಕ್‌ ವಿವಾದನವದೆಹಲಿ: ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಡಳಿತವು ‘ಯುಎಸ್‌ ಏಡ್‌’ ನೆಪದಲ್ಲಿ 180 ಕೋಟಿ ರು. ನೀಡಿತ್ತು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ ಆರೋಪದ ವಿವಾದ ಶುಕ್ರವಾರ ತಿರುವು ಪಡೆದುಕೊಂಡಿದೆ. ‘2022 ರಲ್ಲಿ ಅಮೆರಿಕ 180 ಕೋಟಿ ರು. ನಿಧಿಯನ್ನು ನೀಡಿದ್ದು ಭಾರತಕ್ಕೆ ಅಲ್ಲ, ಬಾಂಗ್ಲಾದೇಶಕ್ಕೆ. ಇದನ್ನು ಭಾರತಕ್ಕೆ ನೀಡಲಾಗಿದೆ ಎಂದು ಟ್ರಂಪ್‌ ತಪ್ಪಾಗಿ ವ್ಯಾಖ್ಯಾನಿಸಿ ಹೇಳಿದ್ದಾರೆ. ಈ ಬಗ್ಗೆ ದಾಖಲೆಗಳು ಲಭಿಸಿವೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರ ಬೆನ್ನಲ್ಲೇ, ಈ ವರದಿಯು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ವರದಿಯನ್ನು ಕಾಂಗ್ರೆಸ್‌ ಸಮರ್ಥಿಸಿದರೆ, ಈ ವರದಿ ಸುಳ್ಳು ಎಂದು ಬಿಜೆಪಿ ತಿರುಗೇಟು ನೀಡಿದೆ.--ಬಿಜೆಪಿಯಿಂದ ಸುಳ್ಳು ಆರೋಪ

‘2022ರಲ್ಲಿ ಭಾರತಕ್ಕೆ ಅಲ್ಲ, ಬಾಂಗ್ಲಾದೇಶಕ್ಕೆ 180 ಕೋಟಿ ರು. ಹಂಚಿಕೆ ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಸತ್ಯಾಸತ್ಯತೆ ಪರಿಶೀಲಿಸದೇ ವಿಪಕ್ಷಗಳತ್ತ ಬಿಜೆಪಿ ಬೆರಳು ತೋರಿಸುತ್ತಿದೆ. ಇದು ದೇಶ ವಿರೋಧಿ ಕೃತ್ಯವಲ್ಲವೆ?- ಕಾಂಗ್ರೆಸ್‌--ಬಾಂಗ್ಲಾ, ಭಾರತ ಎರಡಕ್ಕೂ ಹಣಬಾಂಗ್ಲಾದೇಶಕ್ಕೆ ಅಮೆರಿಕ ನೀಡಿದ್ದು ₹250 ಕೋಟಿ. ಭಾರತಕ್ಕೆ ಕೊಟ್ಟಿದ್ದು ₹180 ಕೋಟಿ. ಟ್ರಂಪ್‌ ಈ ಹೇಳಿಕೆಯನ್ನು 3 ಬಾರಿ ನೀಡಿದ್ದಾರೆ. ಅವರು ಈ ಬಗ್ಗೆ ಗೊಂದಲ ಮಾಡಿಕೊಂಡಿಲ್ಲ. ಆದರೆ ಭಾರತಕ್ಕೆ ಹಣ ನೀಡಿಲ್ಲ ಎಂಬ ವರದಿ ಸುಳ್ಳು.- ಬಿಜೆಪಿ

---ಅಲ್ಲದೆ, ‘2012ರಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹಾಗೂ ಭಾರತ ವಿರೋಧಿ ಉದ್ಯಮಿ ಜಾರ್ಜ್‌ ಸೊರೋಸ್‌ ಅವರ ಓಪನ್‌ ಸೊಸೈಟಿ ಫೌಂಡೇಶನ್‌ ನಡುವೆ ಭಾರತದ ಮತದಾನ ವ್ಯವಸ್ಥೆ ಪ್ರೇರೇಪಣೆಗೆ ಒಪ್ಪಂದ ನಡೆದಿತ್ತು. ಆ ಬಗ್ಗೆ ಮಾಧ್ಯಮ ವರದಿ ಚಕಾರ ಎತ್ತದೇ ಆಯ್ದ ಭಾಗಗಳನ್ನು ಮಾತ್ರ ಪ್ರಕಟಿಸಿದೆ’ ಎಂದಿದ್ದಾರೆ.ಉಪರಾಷ್ಟ್ರಪತಿ ಕಿಡಿ:ಈ ನಡುವೆ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮಾತನಾಡಿ, ‘ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮೇಲೆ ದಾಳಿ ಮಾಡುವವರ ಮುಖವಾಡ ಕಳಚಬೇಕು’ ಎಂದಿದ್ದಾರೆ.ಬಿಜೆಪಿಯೇ ಹಲವಾರು ವರ್ಷ ವಿಪಕ್ಷದಲ್ಲಿತ್ತು. ಆ ಪಕ್ಷವೂ ವಿದೇಶಿ ಶಕ್ತಿಗಳ ಜತೆ ಶಾಮೀಲಾಗಿ ಸರ್ಕಾರವನ್ನು ಅಸ್ಥಿರ ಮಾಡುವ ಯತ್ನ ಮಾಡಿರಬಹುದಲ್ಲವೆ?’ ಎಂದು ಕಾಂಗ್ರೆಸ್‌ ವಕ್ತಾರರಾದ ಪವನ್‌ ಖೇರಾ ಹಾಗೂ ಜೈರಾಂ ರಮೇಶ್‌ ಪ್ರಶ್ನಿಸಿದ್ದಾರೆ.

ಮೋದಿ ಸೋಲಿಸಲು ಅಮೆರಿಕದ ಹಸ್ತಕ್ಷೇಪ ಆತಂಕಕಾರಿ: ಕೇಂದ್ರ

 ಈ ಕುರಿತು ಸರ್ಕಾರದಿಂದ ಪರಿಶೀಲನೆ

ನವದೆಹಲಿ: ‘ಭಾರತದ ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಮೋದಿ ಸೋಲಿಸಲು ಬೈಡನ್‌ ಸರ್ಕಾರ ಪ್ರಯತ್ನಿಸಿತ್ತು, ಯುಎಸ್‌ ಏಡ್‌ ಮೂಲಕ 180 ಕೋಟಿ ರು. ಹಣ ವಿನಿಯೋಗ ಮಾಡಿತ್ತು’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಕುರಿತು ಭಾರತ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ ಹಾಗೂ ಆರೋಪದ ಪರಿಶೀಲನೆ ಮಾಡವುದಾಗಿ ಹೇಳಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾತನಾಡಿ, ‘ಇದು ಆತಂಕಕಾರಿ ವಿಚಾರ. ಸಂಬಂಧಿಸಿದ ಸರ್ಕಾರದ ಏಜೆನ್ಸಿಗಳು ಈ ಕುರಿತು ಪರಿಶೀಲನೆ ನಡೆಸಲಿವೆ’ ಎಂದು ಹೇಳಿದರು.

‘ಭಾರತದಲ್ಲಿ ಅಮೆರಿಕದ ಚಟುವಟಿಕೆ ಮತ್ತು ಹಣಕಾಸು ನೆರವಿಗೆ ಸಂಬಂಧಿಸಿ ಅಲ್ಲಿನ ಆಡಳಿತವು ಬಿಡುಗಡೆ ಮಾಡಿದ ಮಾಹಿತಿಗಳನ್ನು ನೋಡಿದ್ದೇವೆ. ಇದು ಆತಂಕಕಾರಿ ವಿಚಾರ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶದ ಹಸ್ತಕ್ಷೇಪವನ್ನು ತೋರಿಸುತ್ತದೆ’ ಎಂದು ಜೈಸ್ವಾಲ್ ತಿಳಿಸಿದರು.

‘ಅಮೆರಿಕದ ಹಸ್ತಕ್ಷೇಪದ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ’ ಎಂದ ಅವರು, ಆ ಕುರಿತು ಈ ಹಂತದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದು ಸರಿಯೆನಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.