ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ

| Published : Aug 11 2024, 01:39 AM IST / Updated: Aug 11 2024, 03:56 AM IST

ಸಾರಾಂಶ

ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌  ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ.

ನವದೆಹಲಿ: ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌  ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ.

ಒಂದೇ ದಿನದಲ್ಲಿ ಡೇವಿಡ್‌ ಮಾಡಿರುವ ದಾಖಲೆಗಳು ಇಂತಿವೆ:

*ಮೂರು ಸೇಬುಗಳನ್ನು 1 ನಿಮಿಷದಲ್ಲಿ 198 ಬಾರಿ ಕಚ್ಚಿರುವುದು

* ಪರ್ಯಾಯ ಕೈಗಳನ್ನು ಬಳಸಿ ಟೇಬಲ್ ಟೆನ್ನಿಸ್‌ ಬಾಲ್‌ಗಳನ್ನು 2 ಬಾಟಲಿಗಳ ಮೇಲೆ 10 ಬಾರಿ 2.09 ಸೆಕೆಂಡ್‌ನಲ್ಲಿ ನಿಲ್ಲಿಸಿರುವುದು

* ಹಿಂಭಾಗದಿಂದ ಬಾಸ್ಕೆಟ್‌ ಬಾಲ್‌ನ್ನು 30 ಸೆಕೆಂಡ್‌ನಲ್ಲಿ ಗೋಡೆಗೆ 38 ಸಲ ಬಡಿದಿರುವುದು* 30 ಸೆಕಂಡ್‌ಗಳಲ್ಲಿ ಕೈಗಳನ್ನು ಬಳಸಿ 5.100 ಮಿ.ಲೀ ನೀರನ್ನು ತಳ್ಳಿರುವುದು

* 5.38 ಸೆಕೆಂಡ್‌ನಲ್ಲಿ 10 ಟಾಯ್ಲೆಟ್ ಕಾಗದ ರೋಲ್‌ಗಳನ್ನು ಪೇರಿಸಿರುವುದು* ಬೌಲಿಂಗ್ ಚೆಂಡು ಮತ್ತು ಎರಡು ಚೆಂಡುಗಳನ್ನು ಜಗ್ಲಿಂಗ್ ಹಿಡಿತದಲ್ಲಿ ಒಂದು ನಿಮಿಷಕ್ಕೆ 248 ಬಾರಿ ಬ್ಯಾಲೆನ್ಸ್ ಮಾಡಿರೋದು

* ಸ್ಟ್ರಾ ಮೂಲಕ 1 ಲೀ ನಿಂಬೆಹಣ್ಣು ಪಾನಕವನ್ನು 13.99 ಸೆಕೆಂಡ್‌ಗಳಲ್ಲಿ ಕುಡಿದಿರುವುದು

* 30 ಸೆಕೆಂಡ್‌ಗಳಲ್ಲಿ 20 ಟೀ ಶರ್ಟ್‌ಗಳನ್ನು ಧರಿಸಿರುವುದು

* 30 ಸೆಕೆಂಡ್‌ಗೆ 125 ಸಲ ಬೇಸ್‌ ಬಾಲ್‌ಗಳನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸಿ ಬ್ಯಾಲೆನ್ಸ್‌ ಮಾಡಿರೋದು* ಕಾಗದದಿಂದ ಮಡಚಿದ ವಿಮಾನವನ್ನು 5.12 ಸೆಕೆಂಡ್‌ಗಳಲ್ಲಿ ತಯಾರಿಸಿರುವುದು

* 1 ನಿಮಿಷಕ್ಕೆ 29 ಸಲ ಚಾಪ್‌ಸ್ಟಿಕ್‌ಗಳನ್ನು ಅದರ ಗುರಿಯತ್ತ ಎಸೆದಿರುವುದು* ಟೇಬಲ್‌ ಟೆನ್ನಿಸ್‌ ಚೆಂಡುಗಳನ್ನು ಬೌನ್ಸ್‌ ಮಾಡಿ, ಶೇವಿಂಗ್‌ ಫೋಮ್‌ ಹಾಕಿದ ತಲೆ ಮೇಲೆ ಮೇಲೆ ನಿಲ್ಲಿಸಿರುವುದು

* ಬಾಯಿಯಿಂದ ಟೇಬಲ್ ಟೆನ್ನಿಸ್‌ ಚೆಂಡನ್ನು ಗೋಡೆಗೆ ಪುಟಿಯುವಂತೆ ಮಾಡಿರುವುದು