₹4 ಲಕ್ಷಕ್ಕಾಗಿ ದಾಳಿ: ದಾಳಿಕೋರರ ತಪ್ಪೊಪ್ಪಿಗೆ

| Published : Mar 24 2024, 01:31 AM IST / Updated: Mar 24 2024, 01:32 AM IST

ಸಾರಾಂಶ

ಮಾಸ್ಕೋದಲ್ಲಿ ಶುಕ್ರವಾರ ನಡೆಸಿದ ಗುಂಡಿನ ದಾಳಿಯನ್ನು ಹಣಕ್ಕಾಗಿ ಮಾಡಿದ್ದಾಗಿ ಪ್ರಕರಣ ಸಂಬಂಧ ಸಿಕ್ಕಿಬಿದ್ದ ದಾಳಿಕೋರರು ಹೇಳಿದ್ದಾರೆ.

ಮಾಸ್ಕೋ: ಮಾಸ್ಕೋದಲ್ಲಿ ಶುಕ್ರವಾರ ನಡೆಸಿದ ಗುಂಡಿನ ದಾಳಿಯನ್ನು ಹಣಕ್ಕಾಗಿ ಮಾಡಿದ್ದಾಗಿ ಪ್ರಕರಣ ಸಂಬಂಧ ಸಿಕ್ಕಿಬಿದ್ದ ದಾಳಿಕೋರರು ಹೇಳಿದ್ದಾರೆ. ದಾಳಿ ಬಳಿಕ ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದ ಉಗ್ರರನ್ನು ಅದೇ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ ವೇಳೆ, ‘ನಾವೆಲ್ಲಾ ಟರ್ಕಿಯಿಂದ ಇಲ್ಲಿಗೆ ಆಗಮಿಸಿದ್ದೆವು. ಟೆಲಿಗ್ರಾಂ ಚಾನೆಲ್‌ ಮೂಲಕ ನಮಗೆ ದಾಳಿ ನಡೆಸುವಂತೆ ಸೂಚಿಸಲಾಗಿತ್ತು. ಇದಕ್ಕಾಗಿ ತಲಾ 4 ಲಕ್ಷ ರು.ಗಳನ್ನು ನೀಡಲಾಗಿತ್ತು. ಅಲ್ಲದೆ ಅವರೇ ನಮಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಿದ್ದರು. ಏನಾದರೂ ಮಾಡಿ, ಹೇಗಾದರೂ ಮಾಡಿ ಜನರನ್ನು ಕೊಲ್ಲಿ ಎಂಬ ಸಂದೇಶವನ್ನು ನಮಗೆ ನೀಡಲಾಗಿತ್ತು ಎಂದು ಇಬ್ಬರು ದಾಳಿಕೋರರು ಆಡಿರುವ ಮಾತುಗಳು ವಿಡಿಯೋದಲ್ಲಿ ಸೆರೆಯಾಗಿದೆ.