ಶ್ವೇತ ಭವನದಲ್ಲಿ ಮೊಳಗಿದ ಸಾರೇ ಜಹಾನ್‌ ಸೇ...

| Published : May 15 2024, 01:31 AM IST

ಸಾರಾಂಶ

ಡ್ರಮ್ಸ್‌ ಬಾರಿಸಿ ಗಮನ ಸೆಳೆದ ಮಂಡ್ಯದ ಡಾ.ವಿವೇಕ್ ಮೂರ್ತಿ ಅಮೆರಿಕದ ಶ್ವೇತಭವನದಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಏಷ್ಯನ್ ಅಮೆರಿಕನ್, ಹವಾಯಿ ಮತ್ತು ಫೆಸಿಫಿಕ್ ದ್ವೀಪದ ಜನರು ಒಗ್ಗೂಡಿ ನಡೆಸುತ್ತಿರುವ ಪಾರಂಪರಿಕ ತಿಂಗಳು ಕಲ್ಪನೆಯ ಕಾರ್ಯಕ್ರಮದ ಭಾಗವಾಗಿ ಭಾರತದ ದೇಶಭಕ್ತಿಗೀತೆ ‘ಸಾರೆ ಜಹಾನ್‌ ಸೇ ಅಚ್ಚಾ ಹಿಂದೂಸ್ತಾನ್ ಹಮಾರ್’ ಗೀತೆಯನ್ನು ವಾದ್ಯತಂಡದ ಮೂಲಕ ನುಡಿಸಲಾಯಿತು.

ಈ ವೇಳೆ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೊದಲಾದವರು ಇದ್ದರು.

ಇನ್ನು ಶ್ವೇತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿ ನಮ್ಮ ದೇಶದ ಸಾಂಸ್ಕೃತಿಕತೆಯ ಭಾಗವಾಗಿರುವ ಡ್ರಮ್ಸ್‌ ಬಾರಿಸಿ ಅಮೆರಿಕನ್ನರ ಗಮನ ಸೆಳೆದರು.