ಸಾರಾಂಶ
: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಅವರ ಆಪ್ತರಾದ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಹೊಸದಾಗಿ ಸೃಷ್ಟಿಯಾಗಿದ್ದ ‘ಸರ್ಕಾರಿ ಕ್ಷಮತೆ ವಿಭಾಗ’ದ ಮುಖ್ಯಸ್ಥ ಹುದ್ದೆ ತೊರೆದಿದ್ದಾರೆ. ಇದರ ಬದಲು ತಾವು ಒಹಾಯೋ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಅವರ ಆಪ್ತರಾದ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಹೊಸದಾಗಿ ಸೃಷ್ಟಿಯಾಗಿದ್ದ ‘ಸರ್ಕಾರಿ ಕ್ಷಮತೆ ವಿಭಾಗ’ದ ಮುಖ್ಯಸ್ಥ ಹುದ್ದೆ ತೊರೆದಿದ್ದಾರೆ. ಇದರ ಬದಲು ತಾವು ಒಹಾಯೋ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ಟ್ರಂಪ್ ಗೆದ್ದ ನಂತರ ವಿವೇಕ್ ಹಾಗೂ ಎಲಾನ್ ಮಸ್ಕ್‌ಗೆ ಹೊಸ ಹುದ್ದೆ ನೀಡುವ ಘೋಷಣೆಯನ್ನು ಟ್ರಂಪ್ ಮಾಡಿದ್ದರು.ನಿನ್ನೆಯ ಭಾಷಣದಲ್ಲಿ 20 ಸುಳ್ಳು ಹೇಳಿದ ಟ್ರಂಪ್!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅರ್ಧಗಂಟೆ ಭಾಷಣ ಮಾಡಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ 20 ಸುಳ್ಳುಗಳನ್ನು ಹೇಳಿದರು ಎಂದು ‘ವಾಷಿಂಗ್ಟನ್ ಪೋಸ್ಟ್’ ಫ್ಯಾಕ್ಟ್ ಚೆಕ್ಕಿಂಗ್ ನಡೆಸಿ ವರದಿ ಪ್ರಕಟಿಸಿದೆ.ಆರ್ಥಿಕತೆ, ವಿದೇಶಾಂಗ ನೀತಿ, ವಲಸೆ, 2020ರ ಚುಣಾವಣೆ- ಮೊದಲಾದವುಗಳ ಬಗ್ಗೆ ಮಾತನಾಡುವಾಗ ಟ್ರಂಪ್ ಸುಳ್ಳು ಹೇಳಿದರು ಎಂದು ಅದು ಹೇಳಿದೆ.ಈ ಮುಂಚೆ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಟ್ರಂಪ್ 30,573 ಸುಳ್ಳುಗಳನ್ನು ಹೇಳಿದ್ದರು. ಸುಳ್ಳಿನ ದಿನದ ಸರಾಸರಿ ದಿನಕ್ಕೆ 21 ಆಗಿತ್ತು ಎಂದು ಈ ಹಿಂದೆ ಮಾಧ್ಯಮ ವರದಿಗಳು ಹೇಳಿದ್ದವು.