ಸಾರಾಂಶ
ಭಾರತದ ಭೂಭಾಗಳ ಮೇಲೆ ನೆರೆಯ ಬಾಂಗ್ಲಾದೇಶ ಕಣ್ಣುಹಾಕಿದೆ. ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕರೊಬ್ಬರು, ‘ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ದೇಶವು ನ್ಯಾಯಸಮ್ಮತವಾದ ಹಕ್ಕುಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಕೋಲ್ಕತಾ : ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ ದೇಗುಲಗಳ ಮೇಲೆ ದಾಳಿಗಳ ಬೆನ್ನಲ್ಲೇ ಭಾರತದ ಭೂಭಾಗಳ ಮೇಲೆ ನೆರೆಯ ಬಾಂಗ್ಲಾದೇಶ ಕಣ್ಣುಹಾಕಿದೆ. ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕರೊಬ್ಬರು, ‘ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ದೇಶವು ನ್ಯಾಯಸಮ್ಮತವಾದ ಹಕ್ಕುಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ನಿವೃತ್ತ ಬಾಂಗ್ಲಾ ಸೇನಾಧಿಕಾರಿಗಳು, ‘ಕೆಲವೇ ದಿನಗಳಲ್ಲಿ ಬಂಗಾಳವನ್ನು ಆಕ್ರಮಿಸಲಿದ್ದೇವೆ’ ಎಂದಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನ ಆಗುತ್ತಿದೆಯೇ ಎಂಬ ಸಂದೇಹ ಶುರುವಾಗಿದೆ,
ಇದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಸೋಮವಾರ ಮಾತನಾಡಿದ ಮಮತಾ, ‘ನೀವು (ಬಾಂಗ್ಲನ್ನರು) ಬಂಗಾಳ, ಬಿಹಾರ ಮತ್ತು ಒಡಿಶಾವನ್ನು ಆಕ್ರಮಿಸುತ್ತೀರಿ ಎಂದರೆ ನಾವೇನು ಲಾಲಿಪಾಲ್ ತಿನ್ನುತ್ತಾ ಕೂತಿರ್ತೀವಾ? ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ’ ಎಂದು ಗುಡುಗಿದರು.
‘ಬಾಂಗ್ಲನ್ನರ ಹೇಳಿಕೆ ಬಗ್ಗೆ ಬಂಗಾಳ ಜನರು ತಲೆಕೆಡಿಸಿಕೊಳ್ಳಬಾರದು. ನಮ್ಮ ವಿದೇಶಾಂಗ ಕಾರ್ಯದರ್ಶಿ ಮಾತುಕತೆಗಾಗಿ ಬಾಂಗ್ಲಾದೇಶದಲ್ಲಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಬಾರದು. ಫಲಿತಾಂಶಕ್ಕಾಗಿ ಕಾಯೋಣ. ನಾವು ಜವಾಬ್ದಾರಿಯುತ ನಾಗರಿಕರು. ನಮ್ಮ ದೇಶವು ಒಗ್ಗಟ್ಟಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿರೋಣ. ಇಂತಹ ವಿಚಾರಗಳಲ್ಲಿ ಕೇಂದ್ರದ ನಿರ್ಧಾರಗಳಿಗೆ ಬಂಗಾಳ ಬದ್ಧವಾಗಿದೆ’ ಎಂದರು.
ಬಾಂಗ್ಲನ್ನರು ಬಂಗಾಳ, ಬಿಹಾರ ಮತ್ತು ಒಡಿಶಾವನ್ನು ಆಕ್ರಮಿಸುತ್ತೀರಿ ಎಂದರೆ ನಾವೇನು ಲಾಲಿಪಾಲ್ ತಿನ್ನುತ್ತಾ ಕೂತಿರ್ತೀವಾ?
ಮಮತಾ ಬ್ಯಾನರ್ಜಿ, ಬಂಗಾಳ ಸಿಎಂ