ಸಾರಾಂಶ
ಮೋದಿಯ ಅಜೇಯತೆ ದಿಢೀರ್ ಛಿದ್ರವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು, ಜಾಗತಿಕ ಪ್ರಸಿದ್ಧ ಮಾಧ್ಯಮಗಳು ಭಾರತೀಯ ಚುನಾವಣಾ ಫಲಿತಾಂಶವನ್ನು ಮುಖಪುಟಗಳಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟಿಸಿವೆ.
ವಾಷಿಂಗ್ಟನ್/ಲಂಡನ್: ಭಾರತದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಬಹುಮತ ಸಾಧಿಸಿರುವ ಕುರಿತು ಅಮೆರಿಕ, ಯುಕೆ ಸೇರಿದಂತೆ ಅನೇಕ ವಿಶ್ವಮಾಧ್ಯಮಗಳು ಪ್ರಧಾನ ಸುದ್ದಿ ಪ್ರಕಟಿಸಿವೆ.
‘ಮೋದಿ ಅಜೇಯತೆ ದಿಢೀರ್ ಛಿದ್ರವಾಗಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ, ಲಂಡನ್ ಮೂಲದ ಖ್ಯಾತ ಮಾಧ್ಯಮ ಬಿಬಿಸಿ ‘ಜಾಗತಿಕ ಜನಪ್ರಿಯ ನಾಯಕ ನರೇಂದ್ರ ಮೋದಿಗೂ ಅಧಿಕಾರ ವಿರೋಧಿ ಅಲೆಯಿರುವುದಾಗಿ ಭಾರತೀಯರು ಸಾಬೀತಪಡಿಸಿದ್ದಾರೆ’ ಎಂದು ವಿಶ್ಲೇಷಿಸಿದೆ.
ಇಷ್ಟೇ ಅಲ್ಲದೆ ವಾಲ್ ಸ್ಟ್ರೀಟ್ ಜರ್ನಲ್, ಪಾಕಿಸ್ತಾನದ ದಿ ಡಾನ್, ಸಿಎನ್ಎನ್, ಸಿಬಿಸಿ, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.