ಲಾಡೆನ್‌ ಪಾಕ್‌ನಲ್ಲಿರುವ ಮಾಹಿತಿ ಮೊದಲೇ ಸಿಕ್ಕಿತ್ತು: ಮಾಜಿ ಪ್ರಧಾನಿ ಗಿಲಾನಿ

| Published : Feb 03 2024, 01:47 AM IST

ಲಾಡೆನ್‌ ಪಾಕ್‌ನಲ್ಲಿರುವ ಮಾಹಿತಿ ಮೊದಲೇ ಸಿಕ್ಕಿತ್ತು: ಮಾಜಿ ಪ್ರಧಾನಿ ಗಿಲಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿರುವ ಮಾಹಿತಿಯು ಆತನ ಹತ್ಯೆಗೂ ಮೊದಲೇ ಸಿಕ್ಕಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಯುಸುಫ್‌ ರಾಜಾ ಗಿಲಾನಿ ತಿಳಿಸಿದ್ದಾರೆ.

ಇಸ್ಲಾಮಾಬಾದ್‌: ಅಮೆರಿಕ ಯೋಧರಿಂದ 2011ರಲ್ಲಿ ಪಾಕ್‌ನ ಅಬೋಟಾಬಾದ್‌ನಲ್ಲಿ ಹತನಾದ ಕುಖ್ಯಾತ ಉಗ್ರ ಒಸಾಮಾ ಬುನ್‌ ಲಾಡೆನ್‌, ಪಾಕಿಸ್ತಾನದಲ್ಲಿ ಅವಿತಿದ್ದ ಮಾಹಿತಿಯನ್ನು ಅಮೆರಿಕ ಮೊದಲೇ ಪಾಕಿಸ್ತಾನಕ್ಕೆ ನೀಡಿತ್ತು ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಯೂಸುಫ್‌ ರಾಜಾ ಗಿಲಾನಿ ಹೇಳಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, 2008ರಲ್ಲಿ ಪ್ರಧಾನಿಯಾಗಿದ್ದ ವೇಳೆ ಮುಂಬೈ ದಾಳಿ ನಡೆದಿತ್ತು. ಈ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಂದಿನ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್‌, ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಲಾಡೆನ್‌ ಪಾಕಿಸ್ತಾನದಲ್ಲಿ ಅವಿತಿದ್ದಾನೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನಾನು ತಿರಸ್ಕರಿಸಿದ್ದೆ’ ಎಂದರು.