ವಿದ್ಯಾಚೇತನ ಶಾಲೆಗೆ ಡಾ.ಸಿ.ಎಸ್.ದ್ವಾರಕಾನಾಥ್ ಭೇಟಿ

| Published : May 07 2024, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ವಿದ್ಯಾಚೇತನ ಶಾಲೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಡಾ. ಸಿ.ಎಸ್ ದ್ವಾರಕಾನಾಥ್ ಈಚೆಗೆ ಭೇಟಿ ನೀಡಿದರು. ಶಾಲಾ ಮಕ್ಕಳಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ರಚನೆ, ಸಮಾನತೆ, ಸಹಬಾಳ್ವೆ ಪ್ರತಿಪಾದನೆಯ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಸರ್ವರಿಗೂ ಸಮಪಾಲು, ಸಮಬಾಳು ದಕ್ಕುವಂತಾಗಲು ಬಾಬಾಸಾಹೇಬರ ಸಂವಿಧಾನ ಪರಿಣಾಮಕಾರಿ ಆದ ಆಡಳಿತ ಕ್ರಮವನ್ನು, ನೀತಿ ಸಂಹಿತೆಯನ್ನು ರೂಪಿಸಿಕೊಟ್ಟ ಬಗೆಯನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರು. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.

ತಾವೆಲ್ಲ ಇಂದಿನ ಪೀಳಿಗೆಯ ಮಕ್ಕಳು. ಇಂದು ತಾವೆಲ್ಲ ಈ ಮಟ್ಟದ ಶಿಕ್ಷಣದ ಸವಲತ್ತು ಪಡೆಯಲು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎನ್ನುವುದನ್ನು ನೆನಪಿಡಬೇಕು. ಬಾಬಾಸಾಹೇಬರ ಸಮಾನತೆಯ ಮಾರ್ಗವನ್ನು ತಾವೆಲ್ಲ ಅನುಸರಿಸಬೇಕು ಆ ಮೂಲಕ ಸಾಮರಸ್ಯದ ಬದುಕಿಗೆ ಹೊಸ ಆಯಾಮ ನೀಡಬೇಕು. ತಾವು ಓದುತ್ತಿರುವ ಶಿಕ್ಷಣ ಸಂಸ್ಥೆಯ ಆಶಯಗಳನ್ನು ಮುಂದಿನ ದಿನಗಳಲ್ಲಿ ಸಾಕಾರಗೊಳಿಸಲು ಶ್ರಮಿಸಬೇಕು ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಡಾ| ಸಿ.ಎಸ್ ದ್ವಾರಕಾನಾಥ ಅವರನ್ನು ವಿದ್ಯಾಚೇತನ ಶಿಕ್ಷಣ ಸಂಸ್ಥೆ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ವೇಳೆ ಕರ್ನಾಟಕ ರಾಜ್ಯ ಸಹಕಾರ ಕುರಿ ಮತ್ತು ಉಣ್ಣೆ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ , ಅಂಜುಮನ್-ಏ-ಇಸ್ಲಾಂ ಕಮೀಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ, ವಿದ್ಯಾಚೇತನ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್.ಎಂ. ರಾಮದುರ್ಗ, ಚಾಂದತಾರಾ ಮಸ್ಜೀದ್ ಕಮೀಟಿ ಅಧ್ಯಕ್ಷ ಮಹಿಬೂಬ ರಾಮದುರ್ಗ, ಪತ್ರಕರ್ತರಾದ ದಿಲಾವರ, ಸಲೀಂ ಕೊಪ್ಪದ, ಶ್ರೀನಿವಾಸ ಬಬಲಾದಿ, ರಾಜ್ಯ ಅಲೆಮಾರಿ ಆದಿವಾಸಿ ಬುಡಕಟ್ಟು ಮಹಾಸಭಾ ಕಾರ್ಯದರ್ಶಿ ನಾಗರಾಜ್ ವಕೀಲರು, ಹರ್ಷಿತಾ ಗಾಂಧಿ, ಮಂಜುನಾಥ್ ಅಮೃತಹಳ್ಳಿ, ವೇಣು ಹೆಣ್ಣೂರು, ರಿಹಾನಾ ನದಾಫ್, ಅಬ್ದುಲ್‌ರಹಿಮಾನ ತೊರಗಲ್, ಹಸನ ಡಂಗಿ, ಚಮನ ಚೌಧರಿ, ವಿದ್ಯಾಚೇತನ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕ ವಿವೇಕ ಮರಾಠಿ, ಚಿದಾನಂದ ಮುಂಡಾಸದ ಮತ್ತಿತರರು ಉಪಸ್ಥಿತರಿದ್ದರು