ಮೃತ ಮಕ್ಕಳ ಮನೆಗೆ ಶ್ರೇಯಸ್ ಭೇಟಿ, ಸಾಂತ್ವನಆಲೂರು ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಕೆರೆಗೆ ಈಜಲು ಹೋಗಿ ಮೃತಪಟ್ಟ ಮಕ್ಕಳ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್, ಮುರಳಿ ಮೋಹನ್ ಕುಟುಂಬದವರಿಗೆ ಭರವಸೆ ನೀಡಿದರು.