ನಮ್ಮ ನಡೆ ಮತಗಟ್ಟೆ ಕಡೆ ಮತದಾನ ಜಾಗೃತಿಗೆ ಚಾಲನೆ

| Published : May 07 2024, 01:08 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ತಾಲೂಕು ಸ್ವೀಪ್ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಇಲಾಖೆ ಪುರಸಭೆ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಜಾಗೃತಿಯ ಸ್ವೀಪ್ ಚಟುವಟಿಕೆಯ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ತಹಸೀಲ್ದಾರ್‌ ಚಿದಂಬರ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪ್ರತಿಜ್ಞಾವಿಧಿ ಹಾಗೂ ಬೀದಿ ನಾಟಕ, ಜಾಥಾ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಸಿಡಿಪಿಒ ಭಾರತಿ ಕಾಂಬಳೆ, ಸಹಾಯಕ ನಿರ್ದೇಶಕರು(ಗ್ರಾಉ) ಶಿವಾನಂದ ಶಿರಗಾಂವೆ, ವ್ಯವಸ್ಥಾಪಕ ಉದಯಗೌಡ ಪಾಟೀಲ, ಸಹಾಯಕ ನಿರ್ದೇಶಕ (ಪಂ.ರಾ) ಎಸ್.ಎಸ್.ಮಠದ, ಐ.ಇ.ಸಿ ಸಂಯೋಜಕ ರಂಜಿತ ಕಾರ್ಣಿಕ, ಎಂ.ಐ.ಎಸ್ ಸಂಯೋಜಕ ಚೇತನ ಶಿರಹಟ್ಟಿ, ಆಡಳಿತ ಸಹಾಯಕ ಅಕ್ಷಯ ಠಕ್ಕಪ್ಪಗೋಳ, ಸ್ವೀಪ್ ವಿಷಯ ನಿರ್ವಾಹಕಿ ಶ್ರೀದೇವಿ ನಡುವಿನಕೇರಿ, ಸೂಪರವೈಸರ್ ಬಸವರಾಜ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.