ಮಳೆಗೆ ಪ್ರಾರ್ಥಿಸಿ ಕದ್ರಿ ಕ್ಷೇತ್ರದಲ್ಲಿ ಪರ್ಜನ್ಯ ಜಪ

| Published : May 07 2024, 01:08 AM IST

ಮಳೆಗೆ ಪ್ರಾರ್ಥಿಸಿ ಕದ್ರಿ ಕ್ಷೇತ್ರದಲ್ಲಿ ಪರ್ಜನ್ಯ ಜಪ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಗೆ ಪ್ರಾರ್ಥಿಸಿ ಶ್ರೀ ಕ್ಷೇತ್ರ ಕದ್ರಿಯ ಕೆರೆಯ ಆವರಣದಲ್ಲಿ ಸೋಮವಾರ ಪರ್ಜನ್ಯ ಜಪ- ರುದ್ರಪಾರಾಯಣ ಜರಗಿತು. ಕಲ್ಕೂರ ಪತ್ರಿಷ್ಠಾನ ಸಂಯೋಜನೆಯೊಂದಿಗೆ ನಡೆದ ಈ ಕಾರ್ಯಕ್ರಮವು ವೇದ ವಿದ್ವಾಂಸ ವಿದ್ವಾನ್ ಕದ್ರಿ ವಿಠಲದಾಸ ತಂತ್ರಿ ಮಾರ್ಗದರ್ಶನದೊಂದಿಗೆ ನೆರವೇರಿತು. ವಿವಿಧ ಸಂಘಟನೆಯವರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ಆಶ್ರಯದಲ್ಲಿ ವರುಣ ದೇವರ ಪ್ರೀತ್ಯರ್ಥ ಶ್ರೀ ಕ್ಷೇತ್ರ ಕದ್ರಿಯ ಕೆರೆಯ ಆವರಣದಲ್ಲಿ ಸೋಮವಾರ ಪರ್ಜನ್ಯ ಜಪ- ರುದ್ರಪಾರಾಯಣ ಜರಗಿತು.ಕಲ್ಕೂರ ಪತ್ರಿಷ್ಠಾನ ಸಂಯೋಜನೆಯೊಂದಿಗೆ ನಡೆದ ಈ ಕಾರ್ಯಕ್ರಮವು ವೇದ ವಿದ್ವಾಂಸ ವಿದ್ವಾನ್ ಕದ್ರಿ ವಿಠಲದಾಸ ತಂತ್ರಿ ಮಾರ್ಗದರ್ಶನದೊಂದಿಗೆ ನೆರವೇರಿತು. ಶ್ರೀಕ್ಷೇತ್ರ ಕದ್ರಿಯ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ, ರಾಮಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ವಿಪ್ರ ಸಮೂಹ ಕೊಂಚಾಡಿ, ಶಿವಳ್ಳಿ ಸ್ಪಂದನ, ಹವ್ಯಕ ಸಭಾ, ಸ್ಥಾನಿಕ ಬ್ರಾಹ್ಮಣ ಸುಬ್ರಹ್ಮಣ್ಯ ಸಭಾ, ಕೂಟ ಮಹಾಜಗತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಒಕ್ಕೂಟದ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮುಂದಾಳತ್ವ ವಹಿಸಿದ್ದರು. ವಿಪ್ರ ಬಳಗದ ರಾಮಕೃಷ್ಣ ರಾವ್, ಸುಧಾಕರ ರಾವ್ ಪೇಜಾವರ, ಕದ್ರಿ ಗಣೇಶ್ ಹೆಬ್ಬಾರ್, ಉದಯ ಕುಮಾರ್ ಸುಬ್ರಹ್ಮಣ್ಯ ಸದನ, ಶಶಿಪ್ರಭಾ ಐತಾಳ್, ಕದ್ರಿ ವಾಸುದೇವ ಭಟ್, ಡಾ.ಎಸ್.ಎನ್. ಶರ್ಮ, ನಿವೃತ್ತ ಪ್ರೊ. ಗಿರೀಶ್ಚಂದ್ರ ಎ.ಟಿ., ವಿಶ್ವಪತಿ ಮೊಳೆಯಾರ, ಕೇಶವ ನಂದೋಡಿ, ಶಿವರಾಮ ರಾವ್, ಶ್ರೀಕಾಂತ್ ರಾವ್ ಸಹಿತ ಅನೇಕ ಮಂದಿ ಪರ್ಜನ್ಯ ಜಪ- ರುದ್ರ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.ನೇತ್ರಾವತಿ ಅಣೆಕಟ್ಟು ನೀರು ಸಂಗ್ರಹ ಇಳಿಮುಖ:

ತೀವ್ರಗೊಂಡಿರುವ ಬಿಸಿಲ ಬೇಗೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದಲ್ಲಿ ಕಿಂಚಿತ್ ಇಳಿಕೆಯಾದೆ.

ಈ ವರ್ಷಾರಂಭದಲ್ಲಿ ೪ ಮೀಟರ್ ಎತ್ತರದಷ್ಟು ನೀರು ಉಳಿಕೆಯಾಗಿದ್ದ ಬಿಳಿಯೂರು ಅಣೆಕಟ್ಟಿನಲ್ಲಿ ಬೇಸಗೆಯ ಕಾರಣಕ್ಕೆ ನೀರಿನ ಪ್ರಮಾಣದಲ್ಲಿ ಕುಸಿತ ಕಂಡು ೩.೭ ಮೀಟರ್ ದಾಖಲಾಗಿತ್ತು. ಕಳೆದ ಏ. ೧೮ ರಂದು ಸರಪಾಡಿ ಹಾಗೂ ಕಡೆಶಿವಾಲಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಣೆಕಟ್ಟಿಗೆ ೨.೧ ಮೀಟರ್ ನೀರನ್ನು ಹರಿಯ ಬಿಟ್ಟ ಕಾರಣ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ೧.೬ ಮೀಟರ್ ನಷ್ಟು ಮಾತ್ರ ಆಗಿತ್ತು.ಅತೀವ ಬಿಸಿಲ ಬೇಗೆಯ ಹೊರತಾಗಿಯೂ ಹಿನ್ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತವಾಗದೆ ಸುಮಾರು ಅರ್ಧ ಅಡಿಯಷ್ಟು ನೀರಿನ ಸಂಗ್ರಹದಲ್ಲಿ ಕುಸಿತ ಕಾಣಿಸಿದೆ.

ಈ ಮಧ್ಯೆ ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿತವಾಗುತ್ತಿದ್ದು, ಮಂಗಳೂರಿಗೆ ನೀರಿನ ರೇಶನಿಂಗ್ ಪ್ರಾರಂಭಿಸಲಾಗಿದೆ. ನೀರಿನ ಲಭ್ಯತೆ ಮತ್ತಷ್ಟು ಕುಸಿತ ಕಂಡರೆ ಎಎಂಆರ್ ಆಣೆಕಟ್ಟಿನಿಂದ ನೀರನ್ನು ಬಿಡಬೇಕಾದ ಸಾಧ್ಯತೆಯನ್ನು ಅಧಿಕಾರಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈ ಕಾರಣಕ್ಕೆ ಎಎಂಆರ್ ಅಣೆಕಟ್ಟಿಗೆ ಅಗತ್ಯವಾದ ನೀರನ್ನು ಸಮತೋಲನ ಜಲಾಶಯವಾಗಿರುವ ಬಿಳಿಯೂರು ಅಣೆಕಟ್ಟಿನಿಂದ ಒದಗಿಸಿಕೊಂಡರೆ ಬಿಳಿಯೂರು ಅಣೆಕಟ್ಟು ಬರಿದಾಗಿ ಕೃಷಿಕರಿಗೆ ಸಂಕಷ್ಠ ಎದುರಾಗುವ ಭೀತಿ ಮೂಡಿದೆ.