ದುರಸ್ತಿಗೊಂಡ ಬಸವಣ್ಣನ ಭಾವಚಿತ್ರ ಮತ್ತೆ ಅಳವಡಿಕೆ

| Published : May 05 2024, 02:06 AM IST

ದುರಸ್ತಿಗೊಂಡ ಬಸವಣ್ಣನ ಭಾವಚಿತ್ರ ಮತ್ತೆ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ:ಪಟ್ಟಣದ ಅಗಸಿ ಮೇಲಗಡೆ ಬಸವೇಶ್ವರ-ಮೂಲನಂದೀಶ್ವರ ಭಾವಚಿತ್ರವನ್ನು ಶನಿವಾರ ದುರಸ್ತಿ ಮಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ಅಗಸಿ ಮೇಲ್ಗಡೆ ಅಳವಡಿಸಲಾಯಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ:

ಪಟ್ಟಣದ ಅಗಸಿ ಮೇಲಗಡೆ ಬಸವೇಶ್ವರ-ಮೂಲನಂದೀಶ್ವರ ಭಾವಚಿತ್ರವನ್ನು ಶನಿವಾರ ದುರಸ್ತಿ ಮಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ಅಗಸಿ ಮೇಲ್ಗಡೆ ಅಳವಡಿಸಲಾಯಿತು. ಈ ಭಾವಚಿತ್ರಕ್ಕೆ ಅಂಗಡಿ ಕಟ್ಟಡ ನಿರ್ಮಾಣದ ಅಗತ್ಯ ವಸ್ತುಗಳನ್ನು ಸಾಗಿಸುವಾಗ ಹಾನಿಯಾಗಿತ್ತು. ಭಾವಚಿತ್ರದ ಗ್ಲಾಸ್ ಒಡೆದು ಎರಡ್ಮೂರು ದಿನಗಳಾಗಿದ್ದರೂ ಹಾನಿ ಮಾಡಿದವರಾಗಲಿ, ಅಂಗಡಿಯ ಮಾಲೀಕರಾಗಲಿ ಇದನ್ನು ಸರಿಪಡಿಸಿರಲಿಲ್ಲ. ಈ ರೀತಿ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಅವರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿ ಎರಡು ದಿನಗಳಲ್ಲಿ ಭಾವಚಿತ್ರ ಅಳವಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಇಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಹಿರಿಯರು, ಮುಖಂಡರು ಸೇರಿ ಭಾವಚಿತ್ರ ದುರಸ್ತಿ ಮಾಡಿಸಿ ಮತ್ತೆ ಅದೇ ಜಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವೇಶ್ವರ ಭಾವಚಿತ್ರ ಬಸವನಬಾಗೇವಾಡಿ ಸೇರಿದಂತೆ ತಾಲೂಕಿನ ಎಲ್ಲ ಅಂಗಡಿ, ಮನೆಗಳಲ್ಲಿ ಅಳವಡಿಸಿ ಪೂಜೆ ಸಲ್ಲಿಸುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಶಿವಾನಂದ ಈರಕಾರ ಮುತ್ಯಾ, ಮುಖಂಡರಾದ ಬಸವರಾಜ ಹಾರಿವಾಳ, ಭರತು ಅಗರವಾಲ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಶಂಕ್ರೆಪ್ಪ ಹಾರಿವಾಳ, ಸಿದ್ದಲಿಂಗ ಹಾರಿವಾಳ, ಚೇತನ ಕಿಣಗಿ, ಗುರಪ್ಪ ಮಸಬಿನಾಳ, ಬಸವರಾಜ ಗಚ್ಚಿನವರ, ಮಲ್ಲು ಬಾಗೇವಾಡಿ, ಶಿವಾನಂದ ತೋಳನೂರ, ವಿಜಯ ಮದ್ರಾಸ, ಗುರು ಚಟ್ಟೇರ, ಮುತ್ತು ಕಿಣಗಿ, ಬಸವರಾಜ ಹೂಗಾರ ಇದ್ದರು.