ಬಿಸಿಲಿಗೆ ತಾಪಕ್ಕೆ ಬೀದಿ ವ್ಯಾಪಾರಿಗಳ ಬದುಕು ಬೀದಿಪಾಲು

| Published : May 07 2024, 01:00 AM IST

ಬಿಸಿಲಿಗೆ ತಾಪಕ್ಕೆ ಬೀದಿ ವ್ಯಾಪಾರಿಗಳ ಬದುಕು ಬೀದಿಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಎಂ.ಜಿ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಇದ್ದರೂ ತರಕಾರಿ ಮಾರುವುದು ಪುಟ್‌ಪಾತ್ ಮೇಲೆ ಅಂತೆಯೇ ಎಂ.ಜಿ ಮಾರುಕಟ್ಟೆಯ ಮುಂಬಾಗದ ಪುಟ್‌ಪಾತ್ ಮೇಲೆ ಪ್ಲಾಸ್ಟಿಕ್ ಸೂರು ಮತ್ತು ಛತ್ರಿಯ ಆಶ್ರಯದಲ್ಲಿ ವಹಿವಾಟು ನಡೆಸುತ್ತಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಪ್ರಧಾನಿ ಮಂತ್ರಿಗಳ ಸ್ವನಿಧಿ ಯೋಜನೆಯಡಿ ತಾಲೂಕಿನಲ್ಲಿ ೧೬೦೦ ಬೀದಿ ಬದಿ ವ್ಯಾಪಾಗಳು ಸಾಲ ಪಡೆದುಕೊಂಡಿದ್ದಾರೆ, ಕಳೆದ ಎರಡು ತಿಂಗಳಿನಿಂದ ಬಿಸಿಲಿನ ತಾಪಕ್ಕೆ ವ್ಯಾಪಾರ ಇಲ್ಲದೆ ಬೀದಿ ಬದಿ ವ್ಯಾಪರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಬಾರಿ ಬಿಸಿಲ ಬೇಗೆ ಇತ್ತೀಚಿನ ವರ್ಷಗಳಲ್ಲೇ ನೋಡಿರಲಿಲ್ಲ, ನೆರಳಿನ ಕೋಣೆಯಲ್ಲಿ ಕೆಲಸ ಮಾಡುವವರಿಗೆ ಸೆಕೆಯ ಚಿಂತೆಯಾದರೆ, ಬೀದಿ ವ್ಯಾಪಾರದಲ್ಲೇ ಬದುಕು ಕಟ್ಟಿಕೊಂಡಿರುವ ನಾವು ಈ ಬಿರು ಬಿಸಿಲಲ್ಲೇ ಬೇಯದೆ ವಿಧಿ ಇಲ್ಲ, ನಾವಷ್ಟೇ ಅಲ್ಲ, ನಮ್ಮ ತರಕಾರಿಯೂ ಬೆಂದು ಬಾಡಿ ಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಅಳಲು ಆಗಿದೆ.ವ್ಯಾಪಾರಿಗಳ ಬಿಸಿಲ ಬದುಕು

ನಗರದ ಎಂ.ಜಿ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಇದ್ದರೂ ತರಕಾರಿ ಮಾರುವುದು ಪುಟ್‌ಪಾತ್ ಮೇಲೆ ಅಂತೆಯೇ ಎಂ.ಜಿ ಮಾರುಕಟ್ಟೆಯ ಮುಂಬಾಗದ ಪುಟ್‌ಪಾತ್ ಮೇಲೆ ಪ್ಲಾಸ್ಟಿಕ್ ಸೂರು ಮತ್ತು ಛತ್ರಿಯ ಆಶ್ರಯದಲ್ಲಿ ತರಕಾರಿ ಸೇರಿದಂತೆ ಇತರ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳು, ತಮ್ಮ ಬಿಸಿಲ ಬದುಕಿನ ಬಂಡಿಯ ಕುರಿತು ಆಡಿದ ಮಾತುಗಳಾಗಿದೆ.ನಗರದ ಅಂಡ್ರಸನ್‌ಪೇಟೆ, ಕುಪ್ಪಂರಸ್ತೆ, ಗೀತಾ ರಸ್ತೆ, ಬಿ.ಎಂ.ರಸ್ತೆ ಬಸ್ ನಿಲ್ದಾಣದ ಮುಖ್ಯರಸ್ತೆ, ಕೋರ್ಟ್ ರಸ್ತೆಯ ಆಸುಪಾಸುಗಳಲ್ಲಿ ಬೀದಿ ವ್ಯಾಪಾರ ಮಾಡುತ್ತಾ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ, ಬಿಸಿಲು, ಗಾಳಿ, ಮಳೆ ಏನೇ ಬಂದರೂ ವ್ಯಾಪಾರ ಬಿಡುವಂತಿಲ್ಲ, ಬಿಟ್ಟರೆ ವ್ಯಾಪಾರಿಗಳಿಗೆ ಆ ದಿನದ ದುಡಿಮೆ ಖೋತಾ.

ಬಿಸಿಲಿಗೆ ಸುಳಿಯದ ಗ್ರಾಹಕರುಬಿಸಿಲು ಕಾರಣಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ತೀವ್ರ ಇಳಿಮುಖವಾಗಿದೆ, ಗ್ರಾಹಕರು ಬಂದರೆ ಬೆಳಗ್ಗೆಯೇ ಬರುತ್ತಾರೆ, ಇಲ್ಲವಾದರೆ ಸಂಜೆ ಆರು ಗಂಟೆ ಬಳಿಕ ಕಾಣಿಸಿಕೊಳ್ಳುತ್ತಾರೆ, ತೀರಾ ಅನಿವಾರ್ಯವಿದ್ದವರಷ್ಟೇ ಬಿಸಿಲು ಹೊತ್ತಲ್ಲಿ ಬರುತ್ತಾರೆ, ಸ್ಥಿತಿವಂತರು ಮೋರ್, ರಿಯಾಲಿನ್ಸ್ ಸೂಪರ್ ಮಾರ್ಕೆಟ್‌ನಂತಹ ಹವಾನಿಯಂತ್ರಿತ ಮಳಿಗೆಗಳಿಗೆ ಹೋಗುತ್ತಾರೆ, ಕೆಳ ಮಧ್ಯಮ ವರ್ಗದವರು, ಬಡವರು ಹಾಗೂ ಕಾರ್ಮಿಕರು ನಮ್ಮಲ್ಲೇ ಬಂದು ಖರೀದಿಸುತ್ತಾರೆ ಎಂದು ವ್ಯಾಪಾರಿ ಸುರೇಶ್ ಹೇಳಿದರು.ನೀರಿನ ದಾಹ:ಬಿಸಿಲಿನಿಂದಾಗಿ ಮುಂಚೆ ದಿನಕ್ಕೆ ಎರಡ್ಮೂರು ಬಾಟಲಿ ನೀರು ಕುಡಿಯುತ್ತಿದ್ದವರು, ಹೆಚ್ಚಾಗಿರುವ ಬಿಸಿಲ ಝಳಕ್ಕೆ ಇದೀಗ ನಾಲ್ಕೆಐದು ಬಾಟಲಿ ನೀರು ಕುಡಿದರೂ ದಾಹ ಹಿಂಗುತ್ತಿಲ್ಲ, ನಮಗಷ್ಟೇ ಅಲ್ಲದೆ ತರಕಾರಿಗಳಿಗೂ ಐದತ್ತು ನಿಮಿಷಕ್ಕೊಮ್ಮೆ ನೀರು ಎರಚುತ್ತಾ ಅವು ಒಣಗದಂತೆ ನೋಡಿಕೊಳ್ಳಬೇಕು ಎಂದು ವ್ಯಾಪಾರಿ ಮುನಿಯಮ್ಮ ತಿಳಿಸಿದರು.ಬ್ಯಾಂಕ್‌ನಿಂದ ಪ್ರಧಾನ ಮಂತ್ರಿಗಳ ಸ್ವನಿಧಿಯಡಿ ೨೦ ಸಾವಿರ ಸಾಲ ಪಡೆದುಕೊಂಡಿದ್ದೇವೆ, ಬಿಸಿಲು ಅಂತ ನಾವು ಕುಳಿತರೆ ಹೊಟ್ಟೆ ತುಂಬುವುದಿಲ್ಲ, ಬಿಸಿಲಿ-ಮಳೆಯೂ ಏನಿದ್ದರೂ ನಿಭಾಯಿಸಿಕೊಂಡು ಸಂಜೆವರೆಗೆ ವ್ಯಾಪಾರ ಮಾಡಿ ಸಾಲ ತೀರಿಸಿ ನಮ್ಮ ಹೊಟ್ಟೆ ಪಾಡನ್ನು ನೋಡಿಕೊಳ್ಳಬೆಕೆಂದು ಬೀದಿ ಬದಿ ವ್ಯಾಪಾರಿ ಜಯಮ್ಮ ತಿಳಿಸಿದರು.

ನಗರದಲ್ಲಿ ಪ್ರಧಾನ ಮಂತ್ರಿಗಳ ಸ್ವನಿಧಿಯಡಿ ಎರಡು ಸಾವಿರ ಬೀದಿ ಬದಿ ವ್ಯಾಪಾರಿಗಳು ನೊಂದಣಿ ಮಾಡಿಕೊಂಡಿದ್ದಾರೆ, ಇದರಲ್ಲಿ ಒಂದು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ೧೦ ಸಾವಿರ ಸಾಲ ನೀಡಿದ್ದವೇ, ಇನ್ನೂ ೬೦೦ ವ್ಯಾಪಾರಿಗಳಿಗೆ ೨೦ ಸಾವಿರ ಸಾಲ ನೀಡಿರುವುದಾಗಿ ನಗರಸಭೆ ವ್ಯವಸ್ಥಾಪಕ ಶಶಿಕುಮಾರ್ ತಿಳಿಸಿದರು.