ದಾಳಿ ಮುನ್ಸೂಚನೆ: ರಫಾ ನಗರ ತೊರೆಯಲು ಜನರಿಗೆ ಇಸ್ರೇಲ್ ಸೂಚನೆ

| Published : May 07 2024, 01:05 AM IST / Updated: May 07 2024, 03:53 AM IST

ದಾಳಿ ಮುನ್ಸೂಚನೆ: ರಫಾ ನಗರ ತೊರೆಯಲು ಜನರಿಗೆ ಇಸ್ರೇಲ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಫಾ ನಗರವನ್ನು ತೊರೆಯಲು ಸ್ಥಳೀಯರಿಗೆ ಇಸ್ರೇಲ್‌ ಸರ್ಕಾರ ಸಂದೇಶ ರವಾನಿಸಿದ್ದು, ಈ ಮೂಲಕ ಮತ್ತೊಮ್ಮೆ ದಾಳಿ ಮಾಡುವ ಮುನ್ಸೂಚನೆಯನ್ನು ನೀಡಿದೆ.

ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಕದನ ಮತ್ತೊಂದು ಹಂತ ತಲುಪಿದ್ದು, ಇಸ್ರೇಲ್‌ ಸೇನೆಯು ರಫಾದಲ್ಲಿರುವ ಜನತೆಯನ್ನು ಅಲ್ಲಿಂದ ಬೇರೆಡೆಗೆ ತೆರಳುವಂತೆ ಆದೇಶಿಸಿದೆ.

ಈ ಮೂಲಕ ಅಲ್ಲಿ ಭೂದಾಳಿ ಅಥವಾ ವಾಯುದಾಳಿ ನಡೆಸುವ ಮುನ್ಸೂಚನೆ ನೀಡಿದೆ.

ಈ ಕುರಿತು ಹೆಲಿಕಾಪ್ಟರ್‌ ಹಾಗೂ ವಿಮಾನಗಳ ಮೂಲಕ ಸಂದೇಶವನ್ನು ಬಿತ್ತರಿಸಿದ್ದು, ಅಲ್ಲಿನ ಜನತೆಗೆ ಸಮೀಪದಲ್ಲೇ ಇರುವ ಮುವಾಸಿ ಎಂಬಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ.

ಅಲ್ಲಿ ಸುರಕ್ಷಿತವಾಗಿ ಹೋಗಿ ನೆಲೆಸುವಂತೆ ಸೂಚಿಸಿದೆ. ಅದರಂತೆ ಇಸ್ರೇಲ್‌ ಮುವಾಸಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಆಗುವಷ್ಟು ಟೆಂಟ್‌ ಮನೆಗಳನ್ನು ನಿರ್ಮಿಸಿದ್ದು, ಆಸ್ಪತ್ರೆ ಹಾಗೂ ಇನ್ನಿತರ ಸೌಕರ್ಯಗಳನ್ನು ತಯಾರು ಮಾಡಿದೆ.