ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ. ಇವರ ಕುರಿತ ಮಾಹಿತಿ ಪುಟ 5ರಲ್ಲಿದೆ.
ಹೊಸ ಸಚಿವ ಸಂಪುಟದಲ್ಲಿ ಮೋದಿಯೂ ಸೇರಿದಂತೆ ಒಟ್ಟು 7 ಮಾಜಿ ಮುಖ್ಯಮಂತ್ರಿಗಳಿದ್ದಾರೆ.
ನರೇಂದ್ರ ಮೋದಿಯ ಮೂರನೇ ಸಂಪುಟದಲ್ಲಿ ಉತ್ತರಪ್ರದೇಶ ಮತ್ತು ಬಿಹಾರಕ್ಕೆ ಸಿಂಹಪಾಲು ದೊರೆತಿದೆ. ಉತ್ತರಪ್ರದೇಶಕ್ಕೆ 9 ಮತ್ತು ಬಿಹಾರಕ್ಕೆ 8 ಸಚಿವ ಸ್ಥಾನ ಲಭಿಸಿದೆ. ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರಕ್ಕೂ 6 ಸಚಿವ ಸ್ಥಾನ ನೀಡಲಾಗಿದೆ.