ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರ: ರಾಮಲಿಂಗಾರೆಡ್ಡಿ
Jun 25 2024, 12:30 AM ISTತಾಲೂಕಿನ ಹುಣಸನಹಳ್ಳಿ ಹಾಗೂ ಅಕ್ಕೂರು ಗ್ರಾಮದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಸಭೆಯಲ್ಲಿ ನೂರಾರು ಮಂದಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿದರು. ಜನರ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಎರಡು ಕಡೆಯೂ ತಲಾ ೨೪ ಕೌಂಟರ್ಗಳನ್ನು ತೆರೆಯಲಾಗಿತ್ತು. ಅರ್ಜಿ ಸಲ್ಲಿಸಿದ ಜನರಿಗೆ ರಸೀದಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ನಾಗರಿಕರ ಬಳಿ ಹಾಗೂ ಕೌಂಟರ್ಗಳ ಬಳಿ ಅಧಿಕಾರಿಗಳೊಂದಿಗೆ ಖುದ್ದು ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ಅರ್ಜಿಗಳನ್ನು ಪಡೆದು ಪರಿಶೀಲನೆ ನಡೆಸಿದ್ದು ವಿಶೇಷವೆನಿಸಿತು.