ಸಾಗರದಲ್ಲಿ ಸಿಗರೇಟ್ ಬಾಕ್ಸ್ ಕಳವು ಪ್ರಕರಣ: ಅಂತಾರಾಜ್ಯ ಕಳ್ಳ ಬಂಧನ
Mar 16 2024, 01:52 AM ISTಸಾಗರ ಪಟ್ಟಣದ ಯುನೈಟೆಡ್ ಟ್ರೇಡಿಂಗ್ ಕಂಪನಿಯಲ್ಲಿ ೨೦೨೩ರ ಮೇ ತಿಂಗಳಲ್ಲಿ ನಡೆದಿದ್ದ ೧೭ ಲಕ್ಷ ಮೊತ್ತದ ಸಿಗರೇಟ್ ತುಂಬಿದ್ದ ಬಾಕ್ಸ್ ಕಳವು ಪ್ರಕರಣದಲ್ಲಿ ಓರ್ವ ಅಂತರ ರಾಜ್ಯ ಕಳ್ಳನನ್ನು ಬಂಧಿಸಿರುವ ಪೇಟೆ ಠಾಣೆ ಪೋಲಿಸರು, ₹೬ ಲಕ್ಷ ವಶ ಪಡಿಸಿಕೊಂಡು, ಉಳಿದ ಮೂವರಿಗೆ ಹುಡುಕಾಟ ನಡೆಸಿದ್ದಾರೆ. ರಾಜಸ್ಥಾನದ ಜಾಲೂರು ಜಿಲ್ಲೆಯ ಮಾಂಡವಾಲ ಗ್ರಾಮದ ನಿವಾಸಿ ಜೀತೇಂದ್ರಕುಮಾರ್ (೨೭) ಆರೋಪಿ.